2018-19 ಹಿಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ

46,591 ರೈತರಿಗೆ ಬೆಳೆ ಪರಿಹಾರ ಆರ್.ಟಿ.ಜಿ.ಎಸ್ ಮೂಲಕ ಖಾತೆಗೆ ಜಮಾ : ಎಂ.ಪಿ. ಮಾರುತಿ
ಕೊಪ್ಪಳ ನ.  : 2018-19 ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಬರಪೀಡಿತ ಎಂದು ಸರ್ಕಾರವು ಘೊಷಣೆ ಮಾಡಿದ್ದು, ಜಿಲ್ಲೆಯ ಒಟ್ಟು 46,591 ರೈತರಿಗೆ ಬೆಳೆ ಪರಿಹಾರವನ್ನು ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ತಿಳಿಸಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ:ಕAಇ/ಟಿಎನ್‌ಆರ್/2018 ದಿನಾಂಕ: 25-09-2018 ರನ್ವಯ 2018-19ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೊಷಣೆ ಮಾಡಿರುತ್ತಾರೆ.  ಈ ನಾಲ್ಕು ತಾಲ್ಲೂಕಿನ 46,591 ರೈತರಿಗೆ ಇಲ್ಲಿಯವರೆಗೆ ಸರ್ಕಾರದಿಂದ ರೂ. 41.98 ಕೋಟಿ ಬೆಳೆ ಪರಿಹಾರವನ್ನು ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ. ಮತ್ತು 8,831 ರೈತರ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಜೋಡಣೆಯಾದ ಬಗ್ಗೆ ಪರಿಶೀಲಿಸಲು ಪರೀಕ್ಷಾರ್ಥವಾಗಿ ರೂ. 1/- ಗಳನ್ನು ಜಮಾ ಮಾಡಲಾಗಿದೆ .
Please follow and like us:
error