ಸೆ.5 ರಿಂದ ರಿಲಯನ್ಸ್ ಜಿಯೋ ಸಿಮ್ ಎಲ್ಲೆಡೆ ಲಭ್ಯ, ಡಿ.31ರ ತನಕ ಉಚಿತ ಸೇವೆ

reliance_jioಮುಂಬೈ, ಸೆ.1: ವಿಶ್ವದಲ್ಲಿ ಅತ್ಯಂತ ಅಗ್ಗದ ಡಾಟಾ ಆಫರ್‌ನ್ನು ಮುಂದಿಟ್ಟಿರುವ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ, ಜಿಯೋ ಸಿಮ್ ಸೆ.5 ರಿಂದ ಪ್ರತಿಯೊಬ್ಬರಿಗೂ ಲಭ್ಯವಿರಲಿದ್ದು, ಡಿ.31ರ ತನಕ ಉಚಿತವಾಗಿ ಬಳಸಬಹುದು ಎಂದು ಘೋಷಿಸಿದ್ದಾರೆ.

ಮುಂಬೈನಲ್ಲಿ ಬುಧವಾರ ನಡೆದ ರಿಲಯನ್ಸ್‌ನ ಶೇರುದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖೇಶ್ ಅಂಬಾನಿ ಈ ಘೋಷಣೆ ಮಾಡಿದರು.
ಭಾರತದಲ್ಲಿ ದೂರ ಅಂತರ ಸೇರಿದಂತೆ ಎಲ್ಲ ವಾಯ್ಸ ಕರೆಗಳಿಗೆ ಜಿಯೋ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ, ಪ್ರತಿ ಜಿಬಿಗೆ ಕೇವಲ 50 ರೂ. ಶುಲ್ಕ ವಿಧಿಸಲಿದೆ. ಗ್ರಾಹಕರು 75 ಜಿಬಿಗಿಂತ ಹೆಚ್ಚು ಬಳಕೆ ಮಾಡಿದರೆ, ದರ ಪ್ರತಿಜಿಬಿಗೆ ರೂ.25ಕ್ಕೆ ಇಳಿಯಲಿದೆ. ಭಾರತ ಇನ್ನುಮುಂದೆ ಗಾಂಧಿಗಿರಿಯಿಂದ ಡಾಟಾ-ಗಿರಿ ಮಾಡಬಹುದು ಎಂದು ಅಂಬಾನಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾಗೆ ರಿಲಯನ್ಸ್ ಜಿಯೋ ನೆಟ್‌ವರ್ಕ್ ಸೇವೆಯನ್ನು ಅರ್ಪಿಸುತ್ತಿದ್ದೇವೆ. ಜಿಯೋ ಸೇವೆ ರಿಲಯನ್ಸ್‌ನ ಅತಿ ದೊಡ್ಡ ಬಂಡವಾಳ ಹೂಡಿಕೆಯಾಗಿದೆ ಎಂದು ಶೇರುದಾರರ ಸಭೆಯಲ್ಲಿ ಅಂಬಾನಿ ಹೇಳಿದ್ದಾರೆ.

Leave a Reply