ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಇಲಾಖಾ ಗುರುತಿನ ಚೀಟಿ ಕಡ್ಡಾಯ : ಪಿ.ಸುನೀಲ್ ಕುಮಾರ್

ಕೊಪ್ಪಳ ಜು. :  ಸರ್ಕಾರದ ಆಧಿಕಾರಿಗಳು ಮತ್ತು ನೌಕರರು ಕಛೇರಿ ಅವಧಿಯಲ್ಲಿ ಸಂಬಂಧಪಟ್ಟ ಇಲಾಖೆಯು ನೀಡಲಾದ ಹೆಸರು, ಪದನಾಮ ಮತ್ತು ಇಲಾಖೆಯ ವಿವರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರರವರು ತಿಳಿಸಿದ್ದಾರೆ.  

ಕೆಲಸ ಕಾರ್ಯಗಳ ನಿಮಿತ್ತ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಅಧಿಕಾರಿಗಳನ್ನು ಮತ್ತು ನೌಕರರನ್ನು ಗುರುತಿಸಲು ಅನುಕೂಲವಾಗುವಂತೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಬೇಕು.  ಈ ಬಗ್ಗೆ ಸಾರ್ವಜನಿಕರು ಅಥವಾ ಇತರೆ ಕಡೆಯಿಂದ ದೂರುಗಳು ಬಂದಲ್ಲಿ ಸಂಬಂಧಿಸಿದ ಕಛೇರಿ ಮೇಲಾಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error