ಯುವ ರಂಗಕಲಾವಿದರಿಗೆ ಆರ್ಥಿಕ ನೆರವು, ಅವಕಾಶಗಳನ್ನು ರೂಪಿಸಲು ಸಿಎಂಗೆ ಮನವಿ

ಕರ್ನಾಟಕದ ಯುವ ರಂಗಕಲಾವಿದರಿಗೆ ಸೂಕ್ತ ಆರ್ಥಿಕ ನೆರವು ಮತ್ತು ಅವಕಾಶಗಳನ್ನು ರೂಪಿಸುವಂತೆ ಆಗ್ರಹಿಸಿ ಯಂಗ್ ಥಿಯೇಟರ್ ಗಿಲ್ಡ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಕನ್ನಡ ರಂಗಭೂಮಿಗೆ ದೊಡ್ಡ ಪರಂಪರೆಯಿದೆ. ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಹಿಂದೆ ಕರ್ನಾಟಕದಲ್ಲಿ ರಂಗಚಟುವಟಿಕೆಗಳು ಸಮೃದ್ಧವಾಗಿ ನಡೆಯುತ್ತಿದ್ದವು, ಅದರ ಭಾಗವಾಗಿ ಹೆಚ್ಚಿನ ರಂಗ ಸಂಸ್ಥೆಗಳಲ್ಲಿ ಮತ್ತು ರಂಗಚಟುವಟಿಕೆಗಳಲ್ಲಿ ಮುಖ್ಯ ಭಾಗವನ್ನು ಯುವತಿ /ಯುವಕರೇ ಮುನ್ನಡೆಸುತ್ತಿದ್ದರು. ಯುವಜನತೆಯನ್ನು ಬಿಟ್ಟು ಕನ್ನಡ ರಂಗಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.ಇದು ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕದ
ಮುಖ್ಯ ರೆಪರ್ಟರಿಗಳಲ್ಲಿ ನಟ ನಟಿಯರಾಗಿ, ತಂತ್ರಜ್ಞರಾಗಿ, ಸಂಗೀತಗಾರರಾಗಿ ಮತ್ತು ಕೆಲವು ರಂಗ ಶಾಲೆಗಳಲ್ಲಿ ಶಿಕ್ಷಕರಾಗಿ, ಇದಲ್ಲದೆ ರಾಜ್ಯದಲ್ಲಿ ನಡೆಯುವ ಬೇರೆ ಬೇರೆ ರಂಗಭೂಮಿ ಸಂಬಂಧಿ ಕೆಲಸಗಳಲ್ಲಿ “ಫ್ರೀಲಾನ್ಸ್ ” ಕೆಲಸಗಾರರಾಗಿ ತೊಡಗಿಕೊಂಡು ಬದುಕು ನಡೆಸಿಕೊಂಡು ಹೋಗುತ್ತಿದ್ದ ದೊಡ್ಡ ಯುವಸಮೂಹ ಕರ್ನಾಟಕದ ರಂಗಭೂಮಿ ವಲಯದಲ್ಲಿದೆ. ಇವರೆಲ್ಲರೂ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ದೊಡ್ಡಮಟ್ಟದ ಕೆಲಸವನ್ನು ಮಾಡಿದ್ದಾರೆ. ಆದರೆ ಈ ಗುಂಪನ್ನು ಸ್ವತಹ ರಂಗಭೂಮಿ ಹಿರಿಯ ತಲೆಮಾರಿನ ಕಲಾವಿದರುಗಳಾಗಲಿ ಮತ್ತು ಸರ್ಕಾರವಾಗಲಿ ಗಂಭೀರವಾಗಿ ಪರಿಗಣಿಸಿದಂತೆ ತೋರುವುದಿಲ್ಲ ಅವರಿಗಾಗಿ ಯಾವುದೇ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ ಸಹಾಯಧನವನ್ನು ಘೋಷಣೆ ಮಾಡಿದ ಉದಾಹರಣೆಗಳು ತೀರ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಇದು ಒಂದು ಪ್ರಭುತ್ವವು ಮತ್ತು ಅಲ್ಲಿನ ಸಾಂಸ್ಕೃತಿಕ ಕ್ಷೇತ್ರವು ತನಗೆ ತಾನೇ ಮಾಡಿಕೊಳ್ಳುತ್ತಿರುವ ದೊಡ್ಡ ಮೋಸ. ಇದರಿಂದ ದೇಶಕ್ಕೆ ಅಪಾರವಾದ ನಷ್ಟವಾಗುತ್ತದೆ ಹೊರತು ಯಾವುದೇ ರೀತಿಯ ಲಾಭಗಳಿಲ್ಲ. ಸದ್ಯ ಕರ್ನಾಟಕ ಸರ್ಕಾರ ಕಲಾವಿದರಿಗಾಗಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ನ ಫಲಾನುಭವಿಗಳಾಗಲು ಕನಿಷ್ಠ ವಯಸ್ಸು 35 ಇರಬೇಕೆಂದು ಘೋಷಿಸಿ 35 ವಯಸ್ಸಿಗಿಂತ ಕೆಳಗಿರುವ ಯುವತಿ /ಯುವಕರ ಬದುಕುವ ಹಕ್ಕನ್ನು ಉದ್ಯೋಗದ ಹಕ್ಕನ್ನು ಜೊತೆಗೆ ಸಮಾಜದ ಜೊತೆಗೆ ಅವರಿಗಿರುವ ಸಂಬಂಧವನ್ನು ಕ್ಷುಲ್ಲಕವಾಗಿ ಪರಿಗಣಿಸಿದೆ . ಇದು ಆ ಸಮುದಾಯಕ್ಕೆ ಮಾಡುತ್ತಿರುವ ಅವಮಾನವೇ ಹೌದು . ತನ್ನ ಯುವ ತಲೆಮಾರನ್ನು ಕಡೆಗಣಿಸುವ ಯಾವುದೇ ಕ್ಷೇತ್ರವಾಗಲಿ, ಸರ್ಕಾರವಾಗಲಿ ತನ್ನ ಭವಿಷ್ಯದ ಕುರಿತು ಯಾವುದೇ ದೂರದೃಷ್ಟಿಯನ್ನು ಹೊಂದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.ಇದು ಒಳ್ಳೆಯ ಬೆಳವಣಿಗೆಯಲ್ಲ. ಇಷ್ಟೊಂದು ಯುವ ಸಂಪನ್ಮೂಲ ಸರಿಯಾದ ಅವಕಾಶಗಳಿಲ್ಲದೆ ಪೋಲಾಗುತ್ತಿ ವುದನ್ನು ಗಮನಿಸಬೇಕಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೇಡಿಕೆಗಳು ಈ ಕೆಳಗಿನಂತಿವೆ.

ಬೇಡಿಕೆಗಳು
೧. ತಕ್ಷಣವೇ ಆರ್ಥಿಕ ಪ್ಯಾಕೇಜಿಂಗ್ ಅದು ಪಡಿಸಿರುವ 35 ವರ್ಷದ ಅರ್ಹತೆಯನ್ನು ತೆರವುಗೊಳಿಸಿ 18 ವರ್ಷ ದಾಟಿದ ಎಲ್ಲಾ ಕಲಾವಿದರುಗಳಿಗೆ ಆರ್ಥಿಕ ನೆರವು ನೀಡಬೇಕು.
೨. ಕಳೆದ ಎರಡು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳು ನಿಂತಿರುವುದು ಸ್ಪಷ್ಟ ಅಂತ ವಿಷಮಸ್ಥಿತಿಯಲ್ಲಿ ಇಡೀ ವರ್ಷಕ್ಕೆ 3000 ರೂಪಾಯಿಗಳನ್ನು ಘೋಷಿಸಿರುವುದು ತಪ್ಪು. ಕನಿಷ್ಠ ಮುಂದಿನ ಆರು ತಿಂಗಳವರೆಗೂ ಅಥವಾ ರಂಗಚಟುವಟಿಕೆಗಳು ಯಥಾಸ್ಥಿತಿಗೆ ಮರಳುವವರೆಗೂ ಪ್ರತಿಯೊಬ್ಬ ಕಲಾವಿದನಿಗೂ ಪ್ರತಿ ತಿಂಗಳು ತಲಾ ಕನಿಷ್ಠ ಹತ್ತು ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ಘೋಷಿಸಬೇಕು
೩. ಕಲಾವಿದರನ್ನು ಗುರುತಿಸುವ ಅವರ ವಿವರಗಳನ್ನು ಕಲೆ ಹಾಕುವ ಯಾವುದೇ ಸರಿಯಾದ ಸಮೀಕ್ಷೆಗಳು ಈತನಕ ನಡೆದಿಲ್ಲ ಸರ್ಕಾರ ಅಕಾಡೆಮಿಗಳ ಮೂಲಕ ಅಂತಹ ಯೋಜನೆಗಳನ್ನು ಕೈಗೆತ್ತಿಕೊಂಡು ಇಡೀ ಕರ್ನಾಟಕದಲ್ಲಿರುವ ಕಲಾವಿದರ ಸ್ಪಷ್ಟ ಅಂಕಿ ಅಂಶಗಳು ಸರ್ಕಾರದ ಬಳಿ ಇರುವಂತೆ ನೋಡಿಕೊಳ್ಳಬೇಕು.ಇವು ಮುಂದಿನ ದಿನಗಳಲ್ಲಿ ಅವರಿಗೆ ಸಿಗಬೇಕಾದ ಸವಲತ್ತುಗಳು ಮತ್ತು ಮಾಹಿತಿ ದೊರೆಯುವಂತಾಗಲು ಸಹಾಯವಾಗುತ್ತದೆ.
೫. ಎಲ್ಲ ರೀತಿ ಅಕಾಡೆಮಿಗಳಲ್ಲಿ ಆಯಾ ಕ್ಷೇತ್ರದ ಹಿರಿಯರಿದ್ದರು ಸ್ವತಹ ಅವರುಗಳೇ ಆ ಕ್ಷೇತ್ರ ಯುವಕರ ಯುವತಿಯರ ಕುರಿತು ಮಾತನಾಡುತ್ತಿಲ್ಲವಾದ್ದರಿಂದ ಪ್ರತಿ ಅಕಾಡೆಮಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಯುವ ಕಲಾವಿದರಿಗೆ ಪ್ರಾತಿನಿಧ್ಯ ನೀಡಬೇಕು
೫ . ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವಕ-ಯುವತಿಯರಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಸಾಂಸ್ಕೃತಿಕವಾಗಿ ಹೆಚ್ಚಿನ ಅವಕಾಶಗಳನ್ನು ಅವರಿಗೆ ನೀಡಬೇಕು ಆ ಮೂಲಕ ಅವರ ಉದ್ಯೋಗದ ಹಕ್ಕನ್ನು ಅವರಿಗೆ ದೊರೆಯುವಂತೆ ಮಾಡಬೇಕು.
೬. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಅನುದಾನದಲ್ಲಿ ಕನಿಷ್ಟಪಕ್ಷ ಶೇಕಡ 40ರಷ್ಟು ಅನುದಾನವು ಯುವ ರಂಗಕರ್ಮಿಗಳು ನಡೆಸುವ ಸಂಸ್ಥೆಗಳಿಗೆ ಮತ್ತು ಚಟುವಟಿಕೆಗಳಿಗೆ ಮೀಸಲಿಡಬೇಕು.

೭. ಪ್ರತಿ ತಿಂಗಳು ಯುವ ಸಾಂಸ್ಕೃತಿಕ ಸಭೆಗಳನ್ನು ಕರೆದು ಅವರ ಅಹವಾಲುಗಳನ್ನು ಕೇಳಿಸಿಕೊಳ್ಳಬೇಕು

೮. ಯುವಕ/ಯುವತಿಯರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದ ಅಧ್ಯಯನಕ್ಕಾಗಿ ನೆರವು ಕೇಳಿದರೆ ಅವರಿಗೆ ನೆರವು ಯೋಜನೆಗಳನ್ನು ರೂಪಿಸಬೇಕು.

೯. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಸಾಂಸ್ಕೃತಿಕ ಸಂಘಸಂಸ್ಥೆಗಳ ಸಾಂಸ್ಕೃತಿಕ ಚಟುವಟಿಕಗಳು ಬಹುತೇಕ ನಿಂತುಹೋಗಿರುವುದರಿಂದ ಆ ಸಂಘಸಂಸ್ಥೆಗಳಿಗೆ ಕೊಡಬೇಕಾಗಿದ್ದ ಅನುದಾನಗಳನ್ನು ಮಾನವೀಯ ದೃಷ್ಟಿಯಿಂದ ಎಲ್ಲಾ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆರ್ಥಿಕ ಸಂಕಷ್ಟದಲ್ಲಿರುವ, ಹಾಗೂ‌ ಕುಟುಂಬದ ಸದಸ್ಯರು ಕಳೆದುಕೊಂಡು ನಷ್ಟ ಅನುಭವಿಸುತ್ತಿರುವ ಕಲಾವಿದರಿಗೆ ನೆರವಾಗಲು ಬಳಸುವುದು.

೧೦. ಈಗಾಗಲೇ ಆರ್ಥಿಕ ನೆರವಿಗೆ ಅರ್ಜಿ ಹಾಕಲು ನಿಗದಿಪಡಿಸಿದ ಕಡೆಯ ದಿನಾಂಕದ ಗಡುವು ಅಲ್ಪಾವಧಿಯದ್ದಾಗಿದ್ದು, ಗಡುವನ್ನು ಕನಿಷ್ಠ ಒಂದು ವಾರಕ್ಕಾದರೂ ಮುಂದೂಡಬೇಕು.

ಈ ಮೇಲಿನ ಎಲ್ಲಾ ಅಂಶಗಳನ್ನು ಕರ್ನಾಟಕ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಈ ಕುರಿತು ತನ್ನ ನಿಲುವುಗಳನ್ನು ಆದಷ್ಟು ಬೇಗ ಪ್ರಕಟಿಸಬೇಕಾಗಿ ಕರ್ನಾಟಕದ ಯುವ ಕಲಾವಿದರ ಸಮೂಹದ ಪರವಾಗಿ “ಯಂಗ್ ಥಿಯೇಟರ್ ಗಿಲ್ಡ್” ಈ ಮೂಲಕ very ಒತ್ತಾಯಿಸುತ್ತದೆ.ಇದು ಆಗದೇ ಹೋದರೆ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಹೋರಾಟಗಳನ್ನು ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಈ ಸಂದರ್ಭದಲ್ಲಿ ಲಕ್ಷ್ಮಣ ಪೀರಗಾರ, ರಂಗನಾಥ ಕೊಳೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error