ಮಾವಿನ ಬೆಳೆ ಬೂದಿ ರೋಗದ ನಿರ್ವಹಣೆ ಮಾಡುವುದು ಹೇಗೆ ?

ಕೊಪ್ಪಳ ಫೆ. ): ಮಾವಿನ ಬೆಳೆಯಲ್ಲಿ ಬೂದಿ ರೋಗದ ನಿರ್ವಹಣೆಗಾಗಿ ಕೊಪ್ಪಳ ಕೃಷಿ ವಿಸ್ತರಣ ಶಿಕ್ಷಣ ಕೇಂದ್ರದ ವಿಸ್ತರಣ ಮುಂದಾಳ ಡಾ. ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಮಾವಿನ ಪ್ರಮುಖ ರೋಗಗಳಲ್ಲಿ ಒಂದಾದ ಬೂದಿರೋಗವು ಹೂಗೊಂಚಲು ಹಾಗೂ ಎಲೆಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳು ಉದುರುತ್ತವೆ. ಅಲ್ಲದೇ ಎಲೆಗಳು ಮುರುಟುತ್ತವೆ. ಎಳೆಯ ಕಾಯಿಗಳು ಕೂಡ ಉದುರುತ್ತವೆ. ಈ ರೋಗದ ನಿರ್ವಹಣೆಗಾಗಿ ಹೂ ಬಿಡುವ ಮುಂಚೆ ಮತ್ತು ಕಾಯಿ ಕಟ್ಟಿದ ಕೂಡಲೇ 3 ಗ್ರಾಂ ಗಂಧಕ ಅಥವಾ 1 ಗ್ರಾಂ ಟ್ರೈಡೆಮಡಫಾನ್ 50 ಡಬ್ಲ್ಯೂ.ಪಿ. ಅಥವಾ 1 ಗ್ರಾಂ ಕಾರ್ಬೆಂಡೈಜಿಂ 50 ಡಬ್ಲು.ಪಿ 1 ಮಿ.ಲೀ ಹೆಕ್ಸಾಕೊನಾಜೋಲ್ 5 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು. ಅವಶ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜಾÐನಿ (ಕೀಟಶಾಸ್ತ್ರ) ಪಿ.ಆರ್. ಬದರಿಪ್ರಸಾದ್ ಮೊ.ಸಂ. 9900145705, ಇವರನ್ನು ಸಂಪರ್ಕಿಸಬಹುದು .
=======