ಪೋಲಿಸ್ ಇಲಾಖೆಯ ವಿವಿಧ ನೇಮಕಾತಿ : ಅರ್ಜಿ ದಿನಾಂಕ ವಿಸ್ತರಣೆ

ಬೆಂಗಳೂರು, : 2020-20ನೇ ಸಾಲಿನ ನೇಮಕಾತಿ ಸಂಬಂಧ ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಪೊಲೀಸ್ ಕಾನ್ಸ್ ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿರುವ ಪರಿಸ್ಥಿತಿ ಅನ್ವಯ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಎಪಿಸಿ, ಸಿಪಿಸಿ-ಪುರುಷ ಮತ್ತು ಮಹಿಳಾ ಹಾಗೂ ಕಲ್ಯಾಣ ಕರ್ನಾಟಕ ಒಳಗೊಂಡಂತೆ ಒಟ್ಟು 1002 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು.9 ಕೊನೆ ದಿನವಾಗಿದ್ದು, ಶುಲ್ಕವನ್ನು ಜು.13ರೊಳಗೆ ಪಾವತಿ ಮಾಡಬಹುದಾಗಿದೆ.

ಸಿಪಿಸಿ- ಎಪಿಸಿ ಪುರುಷ ಮತ್ತು ಮಹಿಳಾ, ಸಿಎಆರ್, ಡಿಎಎಆರ್ ವೃಂದದ ಒಟ್ಟು 3012 ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಗೆ ಜು.13 ಕೊನೆ ದಿನವಾಗಿದ್ದು, ಜು.15ರೊಳಗೆ ಶುಲ್ಕ ಪಾವತಿ ಮಾಡಬೇಕಾಗಿದೆ. ಅದೇ ರೀತಿ, ಸ್ಪೇಆರ್‍ಪಿಸಿ( ಪುರುಷ, ಮಹಿಳಾ ಕೆಎಸ್‍ಆರ್ ಪಿ, ಐಆರ್ ಬಿ ಹಾಗೂ ಬ್ಯಾಂಡ್ಸ್ ಮನ್) ಒಟ್ಟು 2672 ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆಗೆ ಜು.6 ಕೊನೆ ದಿನವಾಗಿದ್ದು, ಜು.8ರ ಒಳಗೆ ಶುಲ್ಕ ಪಾವತಿಗೆ ಅವಕಾಶ ಇದೆ ಎಂದು ಪ್ರಕಟನೆ ತಿಳಿಸಿದೆ.

 

Please follow and like us:
error