ಕೊಪ್ಪಳ ಜಿಲ್ಲಾ ಕೂದಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆ

ಕನ್ನಡನೆಟ್ ನ್ಯೂಸ್ : ಭಾಗ್ಯನಗರದಲ್ಲಿ ಇಂಸು ಕೂದಲು ವ್ಯಾಪಾರಸ್ಥರ ವಿಶೇಷ ಸಭೆ ಗುರು ಬಸವೇಶ್ವರ ದೇವಸ್ಥಾನದಲ್ಲಿ ಹನ್ನೊಂದು ಗಂಟೆಗೆ ಮುಂಜಾನೆ ಕರೆಯಲಾಗಿತ್ತು. ಸಭೆಯಲ್ಲಿ ವಿಶೇಷ ವಿಷಯಗಳನ್ನು ಚರ್ಚಿಸಲಾಯಿತು ಸಭೆಯಲ್ಲಿ ಸಂಘವು ಅಸ್ತಿತ್ವದಲ್ಲಿ ಮಾಡಲು ತೀರ್ಮಾನಿಸಲಾಯಿತು ಕೊಪ್ಪಳ ಜಿಲ್ಲಾ ಕೂದಲು ವ್ಯಾಪರಸ್ಥರ ಕ್ಷೇಮಾಭಿವೃದ್ಧಿ ಸಂಘ ಕೇಂದ್ರಸ್ಥಾನ ಭಾಗ್ಯನಗರ್ ಎಂಬ ಶಿರೋನಾಮೆ ಯಿಂದ ಸಂಘವು ಅಸ್ತಿತ್ವಕ್ಕೆ ಬರುವಂತೆ ಕೇಳಲಾಯಿತು ಸದರಿ ಸಂಘವು ಶೀಘ್ರದಲ್ಲೇ ನೋಂದಣಿಯಾಗಲಿದ್ದು ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಚುನಾಯಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀನಿವಾಸ ಗುಪ್ತಾ. ಹಾಗೂ ಅಧ್ಯಕ್ಷರಾಗಿ ಹೊನ್ನೂರಸಾಬ್ ಭೈರಾಪುರ. ಉಪಾಧ್ಯಕ್ಷರಾಗಿ ಶ್ರೀಕಾಂತ್ ಹುರಕಡ್ಲಿ ಮತ್ತು ಗೌರವ ಕಾರ್ಯದರ್ಶಿಯಾಗಿ’ ಪರಶುರಾಮ್ ಹೆಚ್ ಪವಾರ್ .ಸಹ ಕಾರ್ಯದರ್ಶಿಯಾಗಿ. ರಮೇಶ ಹ್ಯಾಟಿ ಖಜಾಂಚಿ ಯಾಗಿ ರಾಜೇಶ್ ಎಂ ಮತ್ತು ನಿರ್ದೇಶಕರಾಗಿ ಯಂಕಯ್ಯ .ಚನ್ನಪ್ಪ ತಟ್ಟಿ. ಎನ್ ಆರ್ ಕಾಟ್ವಾ. ಲಕ್ಷ್ಮಣ್ ಚಳಮರದ.ಮಂಜುನಾಥ್ ಸಿ ಗಾಡಾದ. ಮುತ್ತು ವಡ್ಡರ . ನಾಗರಾಜ್ ಕೆಂಚಗುಂಡಿ . ಮಣೀಂದ್ರ. ಮತ್ತು ಸುರೇಶ್ ಕವಲುರ. ಆಯ್ಕೆಯಾಗಿದ್ದಾರೆ.ಸಭೆಯಲ್ಲಿ ಹಿರಿಯರಾದ ವೆಂಕಟಸ್ವಾಮಿ ಯಮುನಪ್ಪ ನರಗುಂದ ನಿಂಗಜ್ಜ ಅನಸಿ.ಹಾಗೂ ಇನ್ನಿತರ ಕೂದಲು ವ್ಯಾಪಾರಸ್ಥರು ಉಪಸ್ಥಿತರಿದ್ದರು ಮುಂದಿನ ದಿನಗಳಲ್ಲಿ ಸಂಘವು ಶ್ರೇಯೋಭಿವೃದ್ಧಿಯಾಗಿ ಬೆಳೆಯಲಿ ಹಾಗೂ ಅನೇಕರಿಗೆ ಕೆಲಸ ಕಾರ್ಯಗಳ ನೀಡುವಂತಾಗಲಿ ಮತ್ತು ಗ್ರಾಮಕ್ಕೆ ಮಾದರಿಯಾಗಲಿ ಎಂದು ಅನೇಕ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಕೊನೆಯಲ್ಲಿ ಇಂದಿನಿಂದಲೇ ಸದಸ್ಯರು ಪದಾದಿಕಾರಿಗಳು ತಮ್ಮ ಕಾರ್ಯವನ್ನು ನಿರ್ವಹಿಸಲು ತಿಳಿಸಲಾಯಿತು ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು

Please follow and like us:
error