ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದ ಉದಯೋನ್ಮುಖ ವಿಜ್ಞಾನ ಬರಹಗಾರರಿಗೆ, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು- ವರದಿಗಾರರಿಗೆ ೩೧ನೇ ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. science_writers
ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು, ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರವನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದ್ದು, ಶಿಬಿರದಲ್ಲಿ ನುರಿತ ವಿಜ್ಞಾನ ಬರಹಗಾರರು, ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆಯ ಕುರಿತು ವಿವಿಧ ಕೌಶಲ್ಯ, ಆಕರ, ಶಬ್ದ ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ ಮುಂತಾದ ಅಂಶಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಶಿಬಿರಾರ್ಥಿಗಳಾಗಿ ಭಾಗವಹಿಸಲಿಚ್ಛಿಸುವವರು ವಿಜ್ಞಾನ ಸಂವಹನದಲ್ಲಿ ಆಸಕ್ತಿ ಹೊಂದಿರುವುದು ಅಪೇಕ್ಷಣೀಯ. ಆಸಕ್ತರು ತಮ್ಮ ಕಿರುಪರಿಚಯ, ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಇತ್ಯಾದಿ ವಿವರಗಳು ಮತ್ತು ಎಲ್ಲೂ ಪ್ರಕಟಗೊಳ್ಳದ ೮೦೦ ಮತ್ತು ೨೫೦ ಪದಗಳ ೨ ಕನ್ನಡ ವೈಜ್ಞಾನಿಕ ಲೇಖನಗಳ ಸ್ವ ರಚಿತ ಪತ್ರಿಯೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಭವನ, ನಂ.೨೪/೨, ೨೧ನೇ ಮುಖ್ಯ ರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು ೫೬೦೦೭೦ ಇ-ಮೇಲ್ krvp.info@gmail.com ಈ ವಿಳಾಸಕ್ಕೆ ಮೇ. ೦೫ ರೊಳಗಾಗಿ ಸಲ್ಲಿಸಬೇಕು.
ಶಿಬಿರದಲ್ಲಿ ಭಾಗವಹಿಸಲು ೨೦ ರಿಂದ ೪೫ ವಯೋಮಾನದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೋಂದಣಿ ಉಚಿತವಾಗಿದ್ದು, ವಿಜ್ಞಾನ ಪರಿಷತ್ತಿನಿಂದ ಊಟೋಪಚಾರ, ವಾಸ್ತವ್ಯ ಹಾಗೂ ಕರ್ತವ್ಯಸಹಿತ ರಜೆ (ಓ.ಓ.ಡಿ.) ಸೌಲಭ್ಯವನ್ನು ಒದಗಿಸಲಾಗುವುದು. ಶಿಬಿರದ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಕಛೇರಿ (೦೮೦- ೨೬೭೧೮೯೩೯ / ೨೬೭೧೮೯೬೨) ಅಥವಾ ೩೧ನೇ ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರದ ರಾಜ್ಯ ಸಂಯೋಜಕ ದಾನಿ ಬಾಬುರಾವ್ ೯೪೪೮೫೬೮೩೬೦ ಇವರಿಗೆ ಸಂಪರ್ಕಿಸಲು  ತಿಳಿಸಿದೆ.

Please follow and like us:
error

Related posts

Leave a Comment