ಹಿರೇಸಿಂದೋಗಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ – ಶಾಸಕ ಕೆ ರಾಘವೇಂದ್ರ ಹಿಟ್ನಾಳ


ಕೊಪ್ಪಳ.೨೩- ಹಿರೇಸಿಂದೋಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಸಿ ಕಾಲೋನಿಯಲ್ಲಿ ಅಂದಾಜು ಮೊತ್ತ ರೂ.೪೦ಲಕ್ಷಗಳ ಸಿಸಿ ರಸ್ತೆ ಮತ್ತು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ೬ ಕೋಠಡಿಗಳ ಅಂದಾಜೂ ಮೊತ್ತ ರೂ.೭೯ ಲಕ್ಷದ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಮೈತ್ರಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ ಶಾಲೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಹಿರೇಸಿಂದೋಗಿ ಗ್ರಾಮದಲ್ಲಿ ಆರಂಭವಾಗಲಿದ್ದು ಇದರಿಂದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ೧ನೇ ತರಗತಿಯಿಂದ ಪದವಿ ಪೂರ್ವ ಹಂತದವರಗೆ ಒಂದೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಲಿಕೆಗೆ ಅನುವು ಮಾಡಿಕೊಡಲು ಕೆ.ಪಿ.ಎಸ್ ಯೋಜನೆ ರೂಪಗೊಂಡಿದೆ, ಇದರಿಂದ ವಿಧ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪರೀಕ್ಷೆ ಎದುರಿಸಲು ತರಬೇತಿ ನೀಡಲಾಗುತ್ತದೆ ಆಕರ್ಷಕ ವಿನ್ಯಾಸ ಶಾಲಾ ಕಟ್ಟಡ, ಕನ್ನಡ ಮತ್ತು ಇಂಗ್ಲೀಷ ಮಾಧ್ಯಮ ಕಲಿಕೆ ಹಾಗೂ ಇನ್ನಿತರ ಶಾಲಾ ವಿಶೇಷತೆ ಹೊಂದಲಿದೆ. ಹಾಗೂ ಚಿಕ್ಕಸಿಂದೋಗಿ ಗ್ರಾಮದ ಹಿರೇಹಳ್ಳಕ್ಕೆ ಬ್ರಿಡ್ಜ್/ಬ್ಯಾರೇಜ್ ಅನುಮೋದನೆಗೊಂಡಿದ್ದು ಬರುವು ದಿನಗಳಲ್ಲಿ ಶಂಖುಸ್ಥಾಪನೆ ನೆರೆವೇರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜೀ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರಾದ ಎಸ್.ಬಿ ನಾಗರಳ್ಳಿ, ಮಾಜೀ ಕೂಡಾ ಅಧ್ಯಕ್ಷರಾದ ಸಯ್ಯದ ಜುಲ್ಲು ಖಾದ್ರಿ, ತಾ.ಪಂ ಅಧ್ಯಕ್ಷರಾದ ಬಾಲಚಂದ್ರನ್, ಎ.ಪಿ.ಎಂ.ಸಿ ಅಧ್ಯಕ್ಷರಾದ ವೆಂಕನಗೌಡ ಹಿರೇಗೌಡ್ರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಭೂಮರೆಡ್ಡಿ,ತಾ.ಪಂ ಸದಸ್ಯರಾದ ನಿಂಗಪ್ಪ ಯತ್ನಟ್ಟಿ, ಹನುಮರೆಡ್ಡಿ ಅಂದನಕಟ್ಟಿ, ವೆಂಕಣ್ಣ ಕೊಳ್ಳಿ, ಗಾಳೆಪ್ಪ ಪೂಜಾರ, ಕೇಶವರೆಡ್ಡಿ, ಹರೀಶ ರೆಡ್ಡಿ, ಹಾಗೂ ಇನ್ನಿತರರು ಉಪಸ್ಥಿತಿಯಲ್ಲಿದ್ದರು.