500, 1000 ರೂ. ನೋಟು ರದ್ದು : 6 ತಿಂಗಳು ಈ ಚಿದಂಬರ ರಹಸ್ಯವನ್ನು ಕಾಪಾಡಿದ್ದು ಹೇಗೆ ?

ಹೊಸದಿಲ್ಲಿ,ನ.9 : ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಚಿದಂಬರ ರಹಸ್ಯವನ್ನು ಪ್ರಧಾನಿ ಆರು ತಿಂಗಳ ಕಾಲ ಹೇಗೆ ಕಾಪಾಡಿಕೊಂಡು ಬಂದಿದ್ದಾರೆಂಬುದೇ ಈಗ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಆರು ತಿಂಗಳ ಹಿಂದೆಯೇ ಇಡಲಾಗಿತ್ತು ಹಾಗೂ ಇಡೀ ಕಾರ್ಯಾಚರಣೆಯನ್ನು ಭಾರೀ ಗೌಪ್ಯವಾಗಿಡಲಾಗಿತ್ತು. ದೇಶದಲ್ಲಿ ಚಲಾವಣೆಯಲ್ಲಿರುವ 2300 ಕೋಟಿ ಮೌಲ್ಯದ ಈ ಕರೆನ್ಸಿ ನೋಟುಗಳನ್ನು ಹಿಂದಕ್ಕೆ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ.

ತಮ್ಮ ಈ ಕಾರ್ಯಯೋಜನೆ ಬಗ್ಗೆ ತಮ್ಮ ಸಚಿವ ಸಂಪುಟಕ್ಕೂ ಮೋದಿ ಮಾಹಿತಿ ನೀಡಿರಲಿಲ್ಲ. ಮೋದಿ ಮಂಗಳವಾರ ದೇಶವನ್ನುದ್ದೇಶಿಸಿ ಭಾಷಣ ಮಾಡುವುದಕ್ಕೆ ಸ್ವಲ್ಪ ಹೊತ್ತು ಮುಂಚಿತವಾಗಿಯಷ್ಟೇ ಅವರ ಸಚಿವ ಸಂಪುಟಕ್ಕೆ ಈ ಬಗ್ಗೆ ತಿಳಿಸಲಾಗಿತ್ತು.

ದೇಶದಲ್ಲಿರುವ ಕಪ್ಪು ಹಣವನ್ನು ನಿಯಂತ್ರಿಸುವುದೇ ಪ್ರಧಾನಿಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಸಫಲವಾಗಿದ್ದೇ ಆದರೆ ಜನರು ಸಕ್ರಮವಾಗಿಯೇ ಹಣಕಾಸು ವ್ಯವಹಾರ ನಡೆಸುತ್ತಾರೆಂಬ ವಿಶ್ವಾಸ ಅವರದ್ದು.

ಈ ಬೃಹತ್ ಯೋಜನೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಪ್ರತ್ಯೇಕವಾಗಿಡಲಾಗಿತ್ತು ಹಾಗೂ ಈ ಬಗೆಗಿನ ಅಧಿಸೂಚನೆಯನ್ನು ಕೂಡ ಬಜೆಟ್ ಕಾಗದಗಳನ್ನು ಮುದ್ರಿಸುವ ಮುದ್ರಣಾಲಯದಲ್ಲೇ ಗೌಪ್ಯವಾಗಿ ಮುದ್ರಿಸಲಾಗಿತ್ತು. ಮಂಗಳವಾರ ಪ್ರಧಾನಿ ತಮ್ಮ ಭಾಷಣ ಮುಗಿಸುವವರೆಗೆ ಮೋದಿಯವರ ಸಚಿವ ಸಹೋದ್ಯೋಗಿಗಳನ್ನು ಕೊಠಡಿಯಿಂದ ಹೊರ ಹೋಗಲೂ ಅನುಮತಿಸಿರಲಾಗಿರಲಿಲ್ಲ.

ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕ್ರಮ ಮೋದಿ ಸರಕಾರಕ್ಕೆ ಜನಬೆಂಬಲವನ್ನು ಗಳಿಸಲು ಬಹಳಷ್ಟು ಸಹಕಾರಿ ಎಂದು ಬಣ್ಣಿಸಲಾಗುತ್ತದೆ. ಮೇಲಾಗಿ ಈ ಕ್ರಮ ಉತ್ತರ ಪ್ರದೇಶ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮಾಡುವ ವೆಚ್ಚವನ್ನು ನಿಯಂತ್ರಿಸಲೂ ಸಹಕಾರಿಯೆನ್ನಲಾಗಿದೆ.

ಕಪ್ಪು ಹಣ ಚಲಾವಣೆಯನ್ನು ಬಿಜೆಪಿ ತನ್ನ ಆಶ್ವಾಸನೆಗನುಗುಣವಾಗಿ ನಿಯಂತ್ರಿಸಲು ವಿಫಲವಾಗಿದೆಯೆಂದು ಬೊಬ್ಬೆ ಹೊಡೆಯುತ್ತಿರುವ ವಿಪಕ್ಷಗಳ secret_behind_currency_banಬಾಯ್ಮುಚ್ಚಿಸುವ ತಂತ್ರವೂ ಇದರಲ್ಲಡಗಿದೆಯೆಂದು ಹೇಳಲಾಗುತ್ತಿದೆ.

ಸದ್ಯ ಜನ ತಮಗೆ ಸರಕಾರದ ಈ ಕ್ರಮದಿಂದ ತೊಂದರೆಯಾಗುತ್ತಿದೆ ಎಂದು ಅಲವತ್ತುಕೊಂಡರೂ ಸಮಯ ಕಳೆದ ಹಾಗೆ ಸರಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದೆ ಎಂದು ಅದನ್ನು ಕೊಂಡಾಡಬಹುದು, ಎಂದು ಕೆಲ ಹಿರಿಯ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.

ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯಾಚೆ ನಡೆಸಲಾದ ಸೀಮಿತ ದಾಳಿ ಹಾಗೂ ಇದೀಗ 500 ಹಾಗೂ 1000 ರೂ ನೋಟುಗಳ ರದ್ದತಿ ಕೇಂದ್ರ ಸರಕಾರಕ್ಕೆ ಜನರ ಬಳಿ ಹೋಗಿ ತನಗೆ ಬೆಂಬಲ ಯಾಚಿಸಲು ಉತ್ತಮ ಅಸ್ತ್ರವೊದಗಿದೆ ಎಂದೂ ಬಣ್ಣಿಸಲಾಗಿದೆ.

Please follow and like us:
error