13ನೆ ದಿನಕ್ಕೆ ಕಾಲಿಟ್ಟ ಹಿರೇಹಳ್ಳ ಪುನಶ್ಚೇತನ ಕಾರ್ಯ : ಸಾರ್ವಜನಿಕರಿಂದ ಸಹಾಯ ಹಸ್ತ

) ಜನ-ಉಪಯೋಗಿ ಹಿರೇಹಳ್ಳದ ಪುನಶ್ಚೇತನಕ್ಕೆ ಸಾರ್ವಜನಿಕರಿಂದ ಸಹಾಯ ಹಸ್ತ
ಕೊಪ್ಪಳ: ಶ್ರೀ ಗವಿಮಠದ ಪೂಜ್ಯ ಶ್ರೀಗಳು ಕೈಗೊಂಡಿರುವ ಜನ-ಉಪಯೋಗಿ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ಕೆ ಬಳಗನೂರಿನ ಶ್ರೀ ಶಿವಶಾಂತವೀರ ಶರಣರು ೫೧ ಸಾವಿರ ರೂಪಾಯಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಎಸ್ ಬಿ ನಾಗರಳ್ಳಿ ಇವರು ೧ ಲಕ್ಷ ರೂಪಾಯಿ ಹಾಗೂ ಭಕ್ತರೋರ್ವರಿಂದ ಗುಪ್ತ ಕಾಣಿಕೆ ೫ ಲಕ್ಷ ರೂಪಾಯಿ ದೇಣಿಗೆಗಳು ಬಂದಿರುತ್ತವೆ. ಇವಿಷ್ಟು ದೇಣಿಗೆಗಳನ್ನು ದಾನಿಗಳು ಪೂಜ್ಯ ಶ್ರೀಗಳ ಹಸ್ತಕ್ಕೆ ನೀಡಿರುತ್ತಾರೆ. ದಾನಿಗಳಿಗೆ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.

) ಹದಿಮೂರನೆ ದಿನಕ್ಕೆ ಕಾಲಿಟ್ಟ ಹಿರೇಹಳ್ಳ ಪುನಶ್ಚೇತನ ಕಾರ್ಯ
ಕೊಪ್ಪಳ: ಹಿರೇಹಳ್ಳದ ಪುನಶ್ಚೇತನ ಕಾರ್ಯವು ದಿನದಿಂದ ದಿನಕ್ಕೆ ಭರದಿಂದ ಸಾಗಿ ಅತ್ಯಂತ ತ್ವರಿತಗತಿಯಾಗಿ ಕೆಲಸಗಳು ಜರುಗುತ್ತಲಿವೆ. ಇಂದು ಹಿರೇಹಳ್ಳ, ಕೋಳುರು, ಕಾಟ್ರಳ್ಳಿ ಹಾಗೂ ಭಾಗ್ಯನಗರ, ದದೇಗಲ್ಲ, ಓಜಿನಹಳ್ಳಿ, ಮಾದಿನೂರ,ಸಿಂದೋಗಿ ಹಿರೇಹಳ್ಳದ ಸುತ್ತಮುತ್ತ ಇರುವ ಹಸಿರು ಪಾಚಿ, ಕೆಸರು, ಮುಳ್ಳುಕಂಟಿಗಳು, ಜಾಲಿಮರಗಳು ಹಾಗೂ ಕಸಕಡ್ಡಿಗಳನ್ನು ತೆಗೆದು ಹಾಕಿ ಸ್ವಚ್ಚಗೊಳಿಸುವ ಕಾರ್ಯ ಜರುಗಿತು. ಈ ಕಾರ್ಯದಲ್ಲಿ ೨೭ ಇಟ್ಯಾಚಿ, ೨ e. ಸಿ. ಬಿ. ೧೪ ಡೋಜರ್ ಹಾಗೂ ೨ ಟ್ರ್ಯಾಕ್ಟರ್‍ಗಳನ್ನು ಸೇರಿ ಒಟ್ಟು ೪೫ ಯಂತ್ರಗಳನ್ನು ಸ್ವಚ್ಛತಾಕಾರ್ಯದಲ್ಲಿ ಬಳಸಿಕೊಳ್ಳಲಾಯ್ತು.

)ಸೇವಾ ಕೈಂಕರ್ಯ
ಕೊಪ್ಪಳ ಹಿರೇಹಳ್ಳದ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ ಕೆಲಸಗಾರರಿಗೆ ಹಿರೇಸಿಂಧೋಗಿ ಗ್ರಾಮಸ್ಥರು ಸ್ವ ಇಚ್ಚೆಯಿಂದ ಅಡುಗೆ ಮಾಡಿ ಪ್ರಸಾದ ಬಡಿಸಿದರು. ಭಾಗ್ಯನಗರದಲ್ಲಿ ಈಶಪ್ಪ ಕುರಟ್ಟಿ ಎಂಬುವವರು ಚಹಾ ಹಾಗೂ ಭಾಗ್ಯನಗರದ ಶಂಕರಾಚಾರ್ಯ ಮಠದ ಶ್ರೀಗಳು ತಂಪಾದ ಪಾನೀಯ ವಿತರಿಸುವ ಸೇವೆ ಮಾಡಿದರು. ಪೂಜ್ಯರೊಂದಿಗೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಸೇವೆ ಸಲ್ಲಿಸಿದರು.

)ಬಳಾಗಾನೂರಿನ ಶ್ರೀ ಶಿವಶಾಂತವೀರ ಶರಣರ ಹಿರೇಹಳ್ಳ ಭೇಟಿ
ಕೊಪ್ಪಳ: ಹಿರೇಹಳ್ಳದ ಪುನಶ್ಚೇತನ ಕಾರ್ಯವು ಹಿರೇಹಳ್ಳ, ಕೋಳುರು, ಕಾಟ್ರಳ್ಳಿ ಹಾಗೂ ಭಾಗ್ಯನಗರ, ದದೇಗಲ್ಲ, ಓಜಿನಹಳ್ಳಿ, ಮಾದಿನೂರ,ಸಿಂದೋಗಿ ಸುತ್ತಲೂ ಜರುಗುತ್ತಿದೆ. ಇಂದು ಹಿರೇಹಳ್ಳದ ಪುನಶ್ಚೇತನ ಕಾರ್ಯವನ್ನು ಬಳಾಗಾನೂರಿನ ಶ್ರೀ ಶಿವಶಾಂತವೀರ ಶರಣರು ವೀಕ್ಷೀಸಿ ಗವಿಮಠದ ಪೂಜ್ಯರು ಕೈಗೊಂಡಿರುವ ಈ ಸಮಾಜಮುಖೀ ಕಾರ್ಯವನ್ನು ಮೆಚ್ಚಿದರು. ಈ ಸಂದರ್ಭದಲ್ಲಿ ಗವಿಮಠದ ಪೂಜ್ಯರು ಇದ್ದರು.

Please follow and like us:
error