ಸೀಮಂತ ಕಾರ್ಯಕ್ರದಲ್ಲಿ ವಿಶೇಷ ಮತದಾನ ಜಾಗೃತಿ

ಿಕೊಪ್ಪಳ ಮಾ. : ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮದಲ್ಲಿ ಇ.ವಿ.ಎಮ್ ವಿ.ವಿ.ಪ್ಯಾಡ್ ಮತಖಾತ್ರಿ ಯಂತ್ರದ ಮೂಲಕ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮುಡಿಸಲಾಯಿತು.ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ತಾಲೂಕಿನ ಬಿಸರಳ್ಳಿ ಗ್ರಾಮದ ಹಿರೇಮಠ ಕುಟುಂಬವು ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮೀತಿಯೊಂದಿಗೆ ಕೈಜೋಡಿಸಿದೆ.ಹೌದು ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಹಿರೇಮಠ ಕುಟುಂಬದ ಸಚಿನ್ ಕುಮಾರ ಹೆಚ್. ಹಾಗೂ ಕಲ್ಪನಾ ಎಸ್. ಹೆಚ್. ದಂಪತಿಗಳ ಸೀಮಂತ ಕಾರ್ಯಕ್ರಮವು ಇದಕ್ಕೆ ಸಾಕ್ಷೀಯಾಗಿದೆ. ಜಿಲ್ಲಾ ಸ್ವೀಪ್ ಸಮಿತಿಯು ಈ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಂಪತಿಗಳಿಗೆ ಮತ್ತು ಅವರ ಕುಟುಂಬದವರಿಗೆ ಹಾಗೂ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಇ.ವಿ.ಎಂ. ಹಾಗೂ ವಿ.ವಿ. ಪ್ಯಾಟ್ ಕುರಿತು ಪ್ರಾತ್ಯಕ್ಷಿಕವಾಗಿ ಮಾಹಿತಿಯನ್ನು ನೀಡಿದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಬಂದ ಸುಮಾರು 150 ರಿಂದ 200 ಜನರಿದ್ದು, ಎಲ್ಲರೂ ಮತದಾನದ ಪ್ರಕ್ರಿಯೆಯನ್ನು ಪರೀಕ್ಷಿಸಿಕೊಂಡರು. ಸೀಮಂತ ಕಾರ್ಯಕ್ರಮದಲ್ಲಿ ಅದರಲ್ಲೂ ಮುಂಬರುವ ಪ್ರಜೆಗೆ ತಾಯಿಯ ಹೊಟ್ಟಯಲ್ಲಿರುವಾಗಲೇ ಮತದಾನ ಪ್ರಕ್ರಿಯೆಗೆ ತಿಳುವಳಿಕೆ ನೀಡಿದ್ದು, ವಿಶೇಷ ವಾಗಿತ್ತು.ಜಿಲ್ಲಾ ಸ್ವೀಪ್ ಸಮಿತಿಯ ಸೆಕ್ಟರ್ ಅಧಿಕಾರಿಗಳು ಇ.ವಿ.ಎಂ. ವಿ.ವಿ. ಪ್ಯಾಟ್ ಕಾರ್ಯದ ಬಗ್ಗೆ ತಿಳುವಳಿಕೆಯನ್ನು ನೀಡಿದರು. ಮತದಾನ ಪ್ರತಿಜ್ಞಾ ವಿದಿಯನ್ನು ಸಹ ಎಲ್ಲರೂ ಇದೇ ಸದರ್ಭದಲ್ಲಿ ಸ್ವೀಕರಿಸಿದರು.

Please follow and like us:
error