ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಮೊತ್ತ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಸಮರ್ಪಿಸಿದ ಶ್ರೀಮತಿ ನೂರ್ ಜಹಾನ್ ಹುಸೇನ್ ಸಾಬ್

koppal ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಜರುಗಿದ  ಸಮಾರಂಭಕ್ಕೆ   ಮುಖ್ಯ ಅತಿಥಿಗಳಾಗಿ ಬಾಗಲಕೋಟಿ ಜಿಲ್ಲೆಯ ಮೋರನಾಳ್ ಗ್ರಾಮದ ಶ್ರೀಮತಿ ನೂರ್ ಜಹಾನ್ ಹುಸೇನ್ ಸಾಬ್ ರೊಳ್ಳಿ ಇವರು ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಇವರಿಗೆ  ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಾಯಿತು. ನಂತರ ಗವಿಮಠಕ್ಕೆ ಆಗಮಿಸಿದ ನೂರಜಹಾನ್ ಹುಸೇನ್ ಸಾಬ್ ರೊಳ್ಳಿ ಇವರು  ಪೂಜ್ಯ ಶ್ರೀಗಳು ಕೈಗೊಂಡಿರುವ ಜನೋಪಯೋಗಿ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ರಮದ ವಿಷಯ ತಿಳಿದುಕೊಂಡು ತಮಗೆ ಸಮಾರಂಭದಲ್ಲಿ ನೀಡಲ್ಪಟ್ಟ ಸಂಪೂರ್ಣ ಪ್ರಶಸ್ತಿಯ ಮೊತ್ತವನ್ನು ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಬಳಸಿಕೊಳ್ಳಲು ಪೂಜ್ಯ ಶ್ರೀಗಳಿಗೆ ಸಮರ್ಪಿಸಿದರು. ಪೂಜ್ಯಶ್ರೀಗಳು ದಾನಿಗಳಿಗೆ ಆಶಿರ್ವದಿಸಿದರು.

Please follow and like us:
error