ಪಪಾಯ ಎಲೆಮುಟುರು ರೋಗದ ನಿರ್ವಹಣೆ ಮಾಡುವುದು ಹೇಗೆ?

ಕೊಪ್ಪಳ ಫೆ. : ಪಪಾಯ ಎಲೆಮುಟುರು ರೋಗದ ನಿರ್ವಹಣೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
ಪಪಾಯ ಹಣ್ಣು, ಒಂದು ಮಹತ್ವದ ಶೀಘ್ರ ಪಲಕೊಡುವ ಹಣ್ಣಿನ ಬೆಳೆ. ಇದನ್ನು ಬಾಧಿಸುವ ಮುಟುರು ರೋಗದ ಲಕ್ಷಣ ಹಾಗೂ ಅದರ ನಿರ್ವಹಣೆಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಎಲೆಗಳು ತೀವ್ರವಾಗಿ ಮುದುಡಿ ಒರಟಾಗುತ್ತವೆ. ಎಲೆದೇಟು ಡೊಂಕಾಗಿ ಬಾಗುತ್ತದೆ. ಗಿಡಗಳ ಬೆಳೆವಣಿಗೆ ಕುಂಠಿತವಾಗಿ ಕಾಯಿಗಳು ಬಹಳ ಚಿಕ್ಕದಾಗಿ ಕಾಣುತ್ತವೆ. ಗಿಡಗಳಲ್ಲಿ ಬಿಳಿ ನೊಣಗಳು ಹೆಚ್ಚಾಗಿ ಕಂಡು ಬರುತ್ತವೆ. ಸಸಿಗಳಿಗೆ ತಪ್ಪದೆ 10 ರಿಂದ 20 ದಿನಗಳ ಅಂತರದಲ್ಲಿ ಅಂತರ ವ್ಯಾಪ್ತಿ ಕೀಟನಾಶಕಗಳನ್ನು ಬಳಸುವದು. ಉದಾಹರಣೆಗೆ 1.7 ಮಿ.ಲೀ. ಡೈಮಿಥೋಮೇಟ್ 30 ಇ.ಸಿ. ಅಥವಾ 1.5 ಮಿ.ಲೀ. ಆಕ್ಸಿಡೆಮಿಟಾನ್ ಮಿಥೈಲ್ 25 ಇ.ಸಿ. ಅಥವಾ 0.25 ಮಿ.ಲೀ ಇಮಿಡಾಕ್ಲೊಪ್ರಿಡ್ ಅಥವಾ 0.20 ಥಯೋಮಿಥಾಕ್ಸಾಮ್ ಅಥವಾ 1.0 ಗ್ರಾಂ ಅಸಿಫೇಟ್ 70 ಎಸ್.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಿಸಬೇಕು.
ಆಗಾಗ್ಗೆ ಕೀಟನಾಶಕ ಬದಲಿಗೆ ಶೇ.5ರ ಬೇವಿನ ಬೀಜದ ಕಷಾಯ ಸಿಂಪರಿಸುವದು. ಇದರ ಬದಲಾಗಿ 1500 ಪಿ.ಪಿ.ಎಮ್. ಇದ್ದ ಅಜಾಡಿರಕ್ಟಿನ್ ಬೇವು ಮೂಲದ ಕೀಟನಾಶಕವನ್ನು 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕು. ನಾಟಿ ಮಾಡುವ ಮೊದಲು ಪ್ರತಿ ಗುಂಡಿಗೆ 10 ಗ್ರಾಂ ಕಾರ್ಬೋಫ್ಯುರಾನ್ 3 ಜಿ. ಬಳಸುವದು ಸೂಕ್ತ. ಶೇ. 1ರ ಬೇವಿನ ಎಣ್ಣೆ ಅಥವಾ ಶೆಂಗಾ ಎಣ್ಣೆ (10 ಮಿ.ಲೀ./ ಲೀಟರ್ ನೀರಿಗೆ) ಕೀಟನಾಶಕದ ಜೊತೆ ಸಿಂಪರಿಸುವದರಿಂದ ಹೆಚ್ಚಿನ ಹತೋಟಿ ಸಾಧ್ಯ ಎಂದು ತಜ್ಞರ ಅಭಿಪ್ರಾಯವಾಗಿದೆ. ಪಪಾಯ ತೋಟದ ಸುತ್ತ ಹತ್ತಿ ಬದನೆ ಮತ್ತು ಕುಂಬಳ ಜಾತಿಯ ಬೆಳೆಗಳನ್ನು ಬೆಳೆಯಬಾರದು. ಹಳೆಯ ಪಪಾಯ ತೋಟದ ಸಮೀಪ ಪಪಾಯ ಸಸಿ ತಯಾರಿಸುವದು ಸೂಕ್ತವಲ್ಲ ಇದರಿಂದ ಸಸಿ ಹಂತದಲ್ಲಿಯೇ ನಂಜಾಣು ರೋಗದ ಬಾಧೆಯನ್ನು ತಡೆಗಟ್ಟಬಹುದು. ಬೂದಿ ರೋಗ ಮತ್ತು ಜೇಡ ನುಸಿಯ ಹತೋಟಿಗಾಗಿ ಶೇ.80ರ 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಅಥವಾ ಳೆ1 ಗ್ರಾಂ. ಕಾರ್ಬೆನ್‍ಂಡೈಜಿಮ್ 50 ಡಬ್ಲ್ಯೂಪಿ. ಪ್ರತಿ ಲೀಟರ್ ಮತ್ತು 2 ಮಿ.ಲೀ. ಡೈಕೋಫಾಲ್ 20 ಇ.ಸಿ. ನೀರಿಗೆ ಬೆರಸಿ ಸಿಂಪಡಿಬೇಕು.
ಹೆಚ್ಚಿನ ಮಾಹಿತಿಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟಶಾಸ್ತ್ರ ತಜ್ಞ ಡಾ. ಪಿ.ಆರ್ ಬದರಿಪ್ರಸಾದ ಮೊ.ಸಂ. 9900145705 ಕ್ಕೆ ಸಂಪರ್ಕಿಸುವಂತೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
=======

Please follow and like us:
error