ದೆವ್ವ ಬಿಡಿಸುವದಕ್ಕೆ ಇಲ್ಲಿ ಮಹಿಳೆಯರಿಗೆ ಬೂಟಿನಿಂದ ನೀರು ಕುಡಿಸುತ್ತಾರೆ !!!

bankaya-mata-bilwar

ಭಿಲ್ವಾರ, ರಾಜಸ್ಥಾನ, : ಸ್ವಾತಂತ್ರ್ಯೋತ್ತರ ಭಾರತ ಸಾಧಿಸಿದ ಪ್ರಗತಿ ಅದ್ಭುತ ಎಂದು ನಾವು ನಮ್ಮ ಬೆನ್ನನ್ನೇ ತಟ್ಟಿಕೊಳ್ಳುತ್ತಿರಬಹುದು. ಆದರೆ ಕೆಲವೊಂದು ಕಡೆ ಧಾರ್ಮಿಕತೆಯ ಸೋಗಿನಲ್ಲಿ ತೀರಾ ಅಮಾನವೀಯ ಅಂಧಶ್ರದ್ಧೆಗಳು ತಾಂಡವವಾಡುತ್ತಿದೆಯೆಂಬುದಕ್ಕೆ ಇಲ್ಲಿದೆ ಒಂದು ಜ್ವಲಂತ ಉದಾಹರಣೆ.

ರಾಜಸ್ಥಾನದ ಭಿಲ್ವಾರಾದಲ್ಲಿರುವ ದೇವಸ್ಥಾನವೊಂದರಲ್ಲಿಭೂತೋಚ್ಛಾಟನೆಯ ನೆಪದಲ್ಲಿ ಅಮಾಯಕ ಮಹಿಳೆಯರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆಯಲ್ಲದೆ ಅವರ ಜೀವವನ್ನೂ ಅಪಾಯಕ್ಕೆ ಬಲಿ ಡಲಾಗುತ್ತಿದೆಯೆಂದು ನ್ಯೂಸ್ 18.ಕಾಂ ವರದಿಯೊಂದು ಹೇಳಿದೆ. ಈ ಅತ್ಯಂತ ಅಮಾನವೀಯ ಪದ್ಧತಿಯಲ್ಲಿ ಮಹಿಳೆಯರಿಗೆ ಬೂಟುಗಳಲ್ಲಿ ನೀರನ್ನು ಹಾಕಿ ಅದನ್ನು ಕುಡಿಯುವಂತೆ ಮಾಡಲಾಗುತ್ತದೆಯೆಂದು ವರದಿಯಲ್ಲಿ ತಿಳಿಸಲಾಗಿದೆ.

ಭಿಲ್ವಾರದಲ್ಲಿರುವ ಬಂಕ್ಯ ಮಾತಾ ದೇವಳದಲ್ಲಿ ಮಹಿಳೆಯರ ಭೂತೋಚ್ಛಾಟನೆ ಮಾಡುವವರೆಂದು ಹೇಳಲಾದ ಭೋಪಾಗಳುಮಹಿಳೆಯರನ್ನು ಹಲವಾರು ಕಠಿಣ ಹಾಗೂ ಅಷ್ಟೇ ಹೀನಾಯ ಕ್ರಮಗಳನ್ನು ಅನುಸರಿಸುವಂತೆ ಮಾಡುತ್ತಾರೆ. ಮಹಿಳೆಯರ ಈ ರೀತಿಯ ಶೋಷಣೆ ಹೊರ ಜಗತ್ತಿನಲ್ಲಿ ದೌರ್ಜನ್ಯವೆಂದೇ ಪರಿಗಣಿಸಬಹುದಾಗಿದೆ. ಈ ದೇವಳದಲ್ಲಿ ಬೂಟುಗಳನ್ನು ಮಹಿಳೆಯರು ತಲೆಯ ಮೇಲೆ ಹೊರುವಂತೆ ಮಾಡಲಾಗುತ್ತದೆ, ಬಾಯಿಯಲ್ಲಿ ಕಚ್ಚಿ ಹಿಡಿಯುವಂತೆ ಮಾಡಲಾಗುತ್ತದೆ ಹಾಗೂ ಕೊನೆಗೆ ಅದರಲ್ಲಿರುವ ನೀರನ್ನು ಕುಡಿಯುವಂತೆ ಮಾಡಲಾಗುತ್ತದೆ. ಮಹಿಳೆಯರು ಹೀಗೆ ಮಾಡುತ್ತಿರುವ ದೃಶ್ಯ ಈ ಗ್ರಾಮದಲ್ಲಿ ಸಾಮಾನ್ಯವಾಗಿದೆ.

ಮೇಲಾಗಿ ಅಲ್ಲಿರುವ ಭೋಪಾ ಅಥವಾ ತಾಂತ್ರಿಕರ ಅಣತಿಯಂತೆ ಕೆಲವೊಂದು ಮಹಿಳೆಯರ ಮೇಲಿನ ದೆವ್ವ ಬಿಡಿಸುವ ಸಲುವಾಗಿ ಅವರನ್ನು ಸುಮಾರು 200 ಮೆಟ್ಟಲುಗಳಿಂದ ಕೆಳಗೆ ದರದರನೆ ಎಳೆಯಲಾಗುತ್ತದೆ.

ಮಾಂತ್ರಿಕರು ಕೆಲವು ಮಹಿಳೆಯರ ಮೈಮೇಲೆ ಆವರಿಸಿರುವ ದೆವ್ವವನ್ನು ಬಿಡಿಸಲು ಸಶಕ್ತರಾಗಿದ್ದಾರೆ ಎಂದು ದೃಢವಾಗಿ ನಂಬಿದ್ದಾರೆ ಭಿಲ್ವಾರಾದ ಜನತೆ.. ಕೆಲವು ಮಹಿಳೆಯರನ್ನಂತೂ ಇಲ್ಲಿ ಚಪ್ಪಲಿಗಳಿಂದ ಹೊಡೆದು ಅವರ ಮೈಮೇಲಿರುವ ‘ದೆವ್ವವನ್ನು’ ಬಿಡಿಸಲಾಗುತ್ತದೆ.

ಈ ಅಮಾನವೀಯಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿರುವಪೊಲೀಸರು ಇಲ್ಲಿಯ ತನಕ ಮೂರು ಮಂದಿಯನ್ನು ಬಂಧಿಸಿದ್ದು ಯಾರೂ ಇಂತಹ ಪದ್ಧತಿಯನ್ನು ಅನುಸರಿಸದಂತೆ ಎಚ್ಚರಿಸಿದ್ದಾರಲ್ಲದೆ ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಿದ್ದಾರೆ. ಇಂತಹ ಅಮಾನವೀಯ ಪದ್ಧತಿಯನ್ನು ಅನುಸರಿಸುವವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಿಲ್ವಾರ ಎಸ್ಪಿತಿಳಿಸಿದ್ದಾರಲ್ಲದೆ ಸಾರ್ವಜನಿಕರು ಇಂತಹ ಮೂಢನಂಬಿಕೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

ವರದಿ:

ಚಿತ್ರಗಳು:

ಕೃಪೆ: news18.com, ವಾರ್ತಾಭಾರತಿ

Please follow and like us:
error