ಅಮರ್ತ್ಯ ಸೇನರು ಮತ್ತು ಪುಂಗಿದಾಸರು- ಜಗದೀಶ ಕೊಪ್ಪ

ಭಾರತದ ಸುದ್ಧಿ ಮಾಧ್ಯಮಗಳಲ್ಲಿ ಜಗತ್ತಿನ ಸರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞರು ಹಾಗೂ ಅಭಿವೃದ್ಧಿ ಅರ್ಥಶಾಸ್ತ್ರದ ಚಿಂತಕರಾದ ಅಮರ್ತ್ಯ ಸೇನರು ಚರ್ಚೆಯಲ್ಲಿದ್ದಾರೆ. ಅಮೇರಿಕಾದಲ್ಲಿ ವಾಸವಾಗಿದ್ದುಕೊಂಡು ಭಾರತ ಮತ್ತು ಬಂಗ್ಲಾ ದೇಶಗಳಲ್ಲಿ ತಾವು ಸ್ಥಾಪಿಸಿರುವ ಪ್ರಾಚಿ (ಇಂಡಿಯ) ಟ್ರಸ್ಟ್ ನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಲು ಪ್ರತಿ ಎರಡು ಮೂರು ತಿಂಗಳಿಗೆ ಭಾರತಕ್ಕೆ ಬರುವ ಅಮಾರ್ತ್ಯಸೇನರು ಇತ್ತೀಚೆಗೆ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ನುಡಿದಿದ್ದರು. ಅದು ಅವರ ವೈಯಕ್ತಿಕ ನಿಲುವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಗುಜರಾತ್ ರಾಜ್ಯದ ಅಭಿವೃದ್ಧಿಯ ವಿಕಾರಗಳು ಹಾಗೂ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆ, ಗ್ರಾಮ ಮತ್ತು ನಗರ ಪ್ರದೇಶಗಳ ನಡುವೆ ಹಿಗ್ಗುತ್ತಿರುವ ಅಸಮಾನತೆಯ ಅಂತರ ಹಾಗೂ ಕೈಗಾರಿಕೋದ್ಯಮದ ಮೋಹದಿಂದಾಗಿ ನಲುಗಿದ ಕೃಷಿ ರಂಗ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅವರು ಪ್ರತಿಕ್ರಿಯಿಸಿದ್ದರು. ಭಾರತದ ಎಲ್ಲಾ ಸಮುದಾಯಗಳು ತಮ್ಮ ಭಾಷೆ, ಜಾತಿ, ಮತ್ತು ಧರ್ಮ, ಇವುಗಳ ಗಡಿ ರೇಖೆಯನ್ನು ಮೀರಿ ಒಪ್ಪಿಕೊಳ್ಳಲಾಗದ ವ್ಯಕ್ತಿತ್ವ ಹಾಗೂ ತನ್ನ ಚಾರಿತ್ರ‍್ಯಕ್ಕೆ ಅಂಟಿಸಿಕೊಂಡ ಕೋಮುವಾದ ಮತ್ತು ಹಿಂಸೆಯ ಮಸಿಯನ್ನು ಅಳಿಸಲಾಗದೆ ಅಸಹಾಯಕರಾಗಿ ಉಳಿದ ನರೇಂದ್ರ ಮೋದಿಯವರನ್ನು ಅಮರ್ತ್ಯ ಸೇನರು ಒಪ್ಪಲು ನಿರಾಕರಿಸಿರಬಹುದು, ಇದು ಅವರ ವ್ಯಯಕ್ತಿಕ ನಿಲುವಾಗಿತ್ತೆ ಹೊರತು ಭಾರತದ ನಿಲುವುವಾಗಿರಲಿಲ್ಲ. ಆದರೆ ಸೇನ್ ರವರು ಮೋದಿಗೆ ಪ್ರತಿಯಾಗಿ ಯಾರನ್ನೂ ಪ್ರಧಾನಿ ಮಂತ್ರಿ ಪದವಿಗೆ ಸೂಚಿಸಿರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಂಘಪರಿವಾರದ ಪುಂಗಿದಾಸರು ಸಂಪೂರ್ಣವಾಗಿ ಎಡವಿದರು.


ಅಮರ್ತ್ಯ ಸೇನರ ಈ ಹೇಳಿಕೆ ಸಹಜವಾಗಿ ಸಂಘ ಪರಿವಾರದ ಭಜನಾ ಮಂಡಳಿಯನ್ನು ಮತ್ತು ಅದರ ಪುಂಗಿದಾಸರನ್ನು ಕೆರಳಿಸಿತು. ಅದರಲ್ಲೂ ಸಂಘಪರಿವಾರದ ಭಜನೆಯಲ್ಲಿ ಇಡೀ ತಮ್ಮ ಜೀವಮಾನವನ್ನು ಸೆವೆಸಿರುವ ಹಾಗೂ ಬಿ.ಜೆ.ಪಿ. ಬೆಂಬಲದಲ್ಲಿ ಒಮ್ಮೆ ರಾಜ್ಯಸಭೆಯ ಸದಸ್ಯರಾಗಿದ್ದ ಚಂದನ್ ಮಿತ್ರ ಎಂಬ ಪತ್ರಕರ್ತ, ಭಾರತ ರತ್ನವನ್ನು ಹಿಂತಿರುಗಿಸಿ ಎಂದು ಸೇನರಿಗೆ ಅಪ್ಪಣೆ ಕೊಡುವ ಹಂತಕ್ಕೆ ತಲುಪಿತು.( ಈ ವ್ಯಕ್ತಿ ದೆಹಲಿಯ ಹಳೆಯದಾದ ದಿನಪತ್ರಿಕೆ ಪಯೋನಿರ್ ಪತ್ರಿಕೆಯ ಸಂಪಾದಕ)
ಮತ್ತೊಬ್ಬ ಆಸಾಮಿ ಆರ್. ಜಗನ್ನಾಥನ್ ಎಂಬಾತ ( ಈತ ಫಸ್ಟ್ ಪೋಸ್ಟ್ ಎಂಬ ಅಂತರ್ಜಾಲ ಪತ್ರಿಕೆಯ ಸಂಪಾದಕ ಹಾಗೂ ಸ್ವಯಂ ಘೋಷಿತ ಬುದ್ದಿಜೀವಿ) ಡೈಲಿ ನ್ಯೂಸ್ ಅಂಡ್ ಅನಾಲಿಸಿಸ್ (ಡಿ.ಎನ್.ಎ.) ಎಂಬ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಸೇನರ ಅರ್ಥಿಕ ಚಿಂತನೆಗಳನ್ನು ಟೀಕಿಸಿ ೨೩-೭-೧೩ ರಂದು ಒಂದು ಅಂಕಣವನ್ನು ಬರೆದಿದ್ದ. ಇದೇ ಲೇಖನ ದಿನಾಂಕ ೨೬-೭-೧೩ ರಂದು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ “ ಅಮರ್ತ್ಯ ಸೇನನೆಂಬ ಅಳಲೆಕಾಯಿ ಪಂಡಿತನ ಆಥಿಕ ನೀತಿಗಳು ” ಎಂಬ ಶಿರ್ಷಿಕೆಯಡಿ ಪ್ರಕಟವಾಯಿತು. ಅರ್ಥಶಾಸ್ತ್ರ ಅದರಲ್ಲೂ ಅಭಿವೃದ್ಧಿಯ ಅರ್ಥಶಾಸ್ರದ ಅ.ಆ, ಇ, ಈ ಗೊತ್ತಿಲ್ಲದ ಅಜ್ಞಾನಿಗಳು ಮಾತ್ರ ಮಾಡಬಹುದಾದ ಟೀಕೆಯಿದು ಎಂದು ನಿಸ್ಸಂಕೋಚವಾಗಿ ಹೇಳಬಹುದು. ಅಂಕಣದಲ್ಲಿರುವ ವಾಖ್ಯೆಗಳನ್ನು ಒಮ್ಮೆ ಗಮನಿಸಿ ನೋಡಿದರೆ ಸಾಕು ಇವರ ಎದೆಯೊಳಗೆ ಏನೆಲ್ಲಾ ವಿಷವಿರಬಹುದೆಂದು ನಾವು ಊಹಿಸಬಹುದು. “ಜೀವಂತವಾಗಿರುವ ಗಂಭೀರ ಹಸಿವು ಎನ್ನುವುದು ದೇಶದಿಂದ ಬಹುತೇಕ ಮಾಯವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವಂತಹದ್ದೆ, ಯಾವುದೋ ಕೆಲವು ಭಾಗಗಳಲ್ಲಿ ಅದು ಇರಬಹುದಷ್ಟೆ.”ಇಂತಹ ಮಾತುಗಳು ನಮ್ಮ ಪತ್ರಕರ್ತರಬಾಯಿಂದ ಹೊರಬಿದ್ದಿವೆ. ಶತ ಶತ ಮಾನಗಳಿಂದ ದೇಶದ ಜ್ವಲಂತ ಸಮಸ್ಯೆಯಾಗಿರುವ ಹಸಿವು ಮತ್ತು ಬಡತನ ಕುರಿತು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಅಥವಾ ಇಂತಹ ಅಂಕಣಗಳನ್ನು ಬರೆಯುವ ಪಂಡಿತರಿಂದ ಇನ್ನೇನು ತಾನೆ ನಾವು ನಿರಿಕ್ಷಿಸಲು ಸಾಧ್ಯ?
ಅವiರ್ತ್ಯ ಸೇನರ ವಿರುದ್ಧ ನೀಡಿದ ಇಂತಹ ಹೇಳಿಕೆ ಮತ್ತು ಟೀಕೆಗೆ ಜಾಗತಿಕ ಮಟ್ಟದಲ್ಲಿ ತೀವ್ರವಾದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಚಂದನ್ ಮಿತ್ರ ಎಂಬ ಪತ್ರಕರ್ತ ಕೂಡಲೆ ಕ್ಷಮೆ ಯಾಚಿಸಿದ ಘಟನೆ ಜರುಗಿತು. ಬಿ.ಜೆ.ಪಿ ಪಕ್ಷದ ನಾಯಕರು ಸಹ ಇಂತಹ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. . ಈ ಎಲ್ಲಾ ಬೆಳವಣಿಗೆಯ ನಂತರ ಕನ್ನಡ ಪ್ರಭ ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಅಮರ್ತ್ಯ ಸೇನರ ಹೇಳಿಕೆಯನ್ನು ಬೆಂಬಲಿಸಿ ಲೇಖನವನ್ನು ಬರೆದು ಪ್ರಕಟಿಸಿತು.
ಅವi್ತ್ಯ ಸೇನರನ್ನು ಕಾಂಗ್ರೇಸ್ ಪಕ್ಷದ ನೇತೃತ್ವದ ಯು.ಪಿ.ಎ. ಸರ್ಕಾರದ ತುತ್ತೂರಿಯೆಂದು ಟೀಕಿಸುವ ಪಂಡಿತ ಶಿಖಾಮಣಿಗಳು ಒಮ್ಮೆಯಾದರೂ ಈ ವರ್ಷದ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿರುವ ಅವರ “An uncertain glory “ ಎಂಬ ಕೃತಿಯನ್ನಾದರೂ ಓದಬೇಕಿತ್ತು. ಅವiರ್ತ್ಯ ಸೇನರು ಯಾವ ಸರ್ಕಾರಗಳ ಅಥವಾ ಪಕ್ಷಗಳ ಪರವಾಗಿಲ್ಲ, ಅವರು ಹಸಿದವರ ಮತ್ತು ಬಾಯಿಲ್ಲದವರ ಪರವಾಗಿದ್ದಾರೆ ಎಂಬುದು ಮನದಟ್ಟಾಗುತ್ತಿತ್ತು.
ಅರ್ಥಶಾಸ್ತ್ರವೆಂದರೆ, ಅದು ಬೇಡಿಕೆ, ಪೂರೈಕೆ, ಹಣಕಾಸು ನಿರ್ವಹಣೆ ಅಥವಾ ಆರ್ಥಿಕ ನೀತಿಗಳನ್ನು ಅಧ್ಯಯನ ಮಾಡುವ ಪಠ್ಯವಾಗಿ ಉಳಿದಿಲ್ಲ. ಬದಲಾಗಿ ಕಳೆದ ಎರಡು ಮೂರು ದಶಕಗಳಲ್ಲಿ ಅರ್ಥಶಾಸ್ತ್ರ ಹಲವಾರು ಶಾಖೆಗಳಾಗಿ, ಒಂದು ಜ್ಞಾನ ಶಿಸ್ತುವಾಗಿ ಕವಲೊಡೆದಿದೆ. ಅದರಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರವೂ ಸಹ ಅದ್ಯಯನದ ಶಾಖೆಯಾಗಿದೆ. ಈಗಿನ ಅರ್ಥಶಾಸ್ತ್ರಕ್ಕೆ ಕೇವಲ ಆರ್ಥಿಕ ನೋಟಗಳಾಗಲಿ ಅಥವಾ ಅದರ ಮಗ್ಗುಲು ಮಾತ್ರ ಸಾಲದು ಅದಕ್ಕೆ ಸಾಮಾಜಿಕ, ರಾಜಕೀಯ, ಸಾಂಸ್ಕತಿಕ ಹಾಗೂ ಐತಿಹಾಸಿಕ ಆಯಾಮಗಳು ಬೇಕು ಎಂಬುದನ್ನು ತೋರಿಸಿಕೊಟ್ಟಿರುವ ಹಲವಾರು ಮಾನವೀಯ ಮುಖವುಳ್ಳ ಅರ್ಥಶಾಸ್ತ್ರಜ್ಞರಲ್ಲಿ ಅಮರ್ತ್ಯ ಸೇನ್ ಕೂಡ ಒಬ್ಬರು.
ಇವರು ರಚಿಸಿದ “ The Idea of Justiceಎಂಬ ಕೃತಿ ಅಭಿವೃದ್ಧಿಯ ಕುರಿತು ಆಳವಾದ ಒಳನೋಟಗಳನ್ನು ಒಳಗೊಂಡಿರುವ ಕೃತಿಯಾಗಿದೆ. ಇದರಲ್ಲಿರುವ ಚಿಂತನೆಗಳು ಸೇನರಿಗೆ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ತಂದುಕೊಡಲು ಕಾರಣವಾಗಿವೆ. ಈ ಕೃತಿಯ ಮೂರು ಮತ್ತು ನಾಲ್ಕನೇ ಭಾಗದಲ್ಲಿರುವ ಕೆಲವು ಅಧ್ಯಾಯಗಳು ಜಾಗತಿಕ ಮಟ್ಟದಲ್ಲಿ ಮನುಕುಲದ ಏಳಿಗೆಗಾಗಿ ಒರ್ವ ವಿಧ್ವಾಂಸ ಹೇಗೆ ಚಿಂತಿಸಬಲ್ಲ ಎಂಬುದಕ್ಕೆ ಸಾಕ್ಷಿಯಾಗಿವೆ. ಅದೇ ರೀತಿ ಇವರ “ Development As a Freedom” ಕೃತಿಯಲ್ಲಿ ಅಭಿವೃದ್ಧಿಯ ಯೋಜನೆಗಳು ಏನನ್ನು ಒಳಗೊಂಡಿರಬೇಕು ಎಂಬುದನ್ನು ನಿರ್ವಚಿಸಿದ್ದಾರೆ. ಭಾರತದಲ್ಲಿ ಅಮಾತ್ರ‍್ಯ ಸೇನರನ್ನು ಕಾಂಗ್ರೇಸ್ ಸರ್ಕಾರದ ವಕ್ತಾರರೆಂದು ಟೀಕಿಸುವ ಪುಂಗಿದಾಸರು ಅವಶ್ಯವಾಗಿ ಓದಲೇಬೇಕಾದ ಮತ್ತೊಂದು ಕೃತಿ ಇತ್ತೀಚೆಗೆ ಬಿಡುಗಡೆಯಾದ An uncertain glory“” ಎಂಬ ಪುಸ್ತಕ. ಇದರಲ್ಲಿ ಭಾರತದಲ್ಲಿನ ಅಭಿವೃದ್ಧಿಯ ಅಸಮಾನತೆಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ೧೯೭೯ರಲ್ಲಿ ಬೆಲ್ಜಿಯಂ ನಿಂದ ಭಾರತಕ್ಕೆ ಬಂದು ೨೦೦೨ ರಲ್ಲಿ ಇಲ್ಲಿನ ಪೌರತ್ವ ಸ್ವೀಕರಿಸಿರುವ ಜಿನ್ ಡ್ರೇಜ್ ಎಂಬ ವಿಧ್ವಾಂಸ ( ಅಲಹಾಬಾದ್ ವಿ.ವಿ.ಯ ಪ್ರಾಧ್ಯಾಪಕ) ಇವರ ಜೊತೆಗೂಡಿ ರಚಿಸಿರುವ ಈ ಕೃತಿಯಲ್ಲಿ ಭಾರತದ ೪೦ ಕೋಟಿ ಜನತೆ ಇವೊತ್ತಿಗೂ ಮನುಷ್ಯನ ಮೂಲಭೂತ ಬೇಡಿಕೆಗಳಾದ ವಿದ್ಯುತ್, ಅರೋಗ್ಯ, ಶೌಚಾಲಯ, ಶಿಕ್ಷಣ ಮುಂತಾದ ಸೌಲಭ್ಯಗಳಿಲ್ಲದೆ ವಂಚಿತವಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ಕೇವಲ ರಾಜಕೀಯ ಅಕಾಂಕ್ಷೆಯುಳ್ಳ ಯೋಜನೆಗಳಿಂದ ದೇಶದ ಅಭಿವೃದ್ಧಿ ಸಾದ್ಯವಿಲ್ಲ ಎಂದಿರುವ ಅವರು, ರೈತರಿಗೆ ಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಸಬ್ಸಿಡಿ ನೀಡಿದರೆ ಸಾಲದು ಅವರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ದೊರಕುವಂತಾಗಬೇಕು. ಅದೇ ರೀತಿ ಬಡವರಿಗೆ ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡಿದರೆ ಸಾಲದು, ಅವರಿಗೆ ಕೈಗೆಟುಕುವ ಬೆಲೆಯಲ್ಲಿ ಶಿಕ್ಷಣ, ಆರೋಗ್ಯ, ವಸತಿ. ಹೀಗೆ ಎಲ್ಲಾ ಸೌಲಭ್ಯಗಳು ನಿಲುಕುವಂತಾಗಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದಿರುವ ಸೇನ್, ಭಾರತದಲ್ಲಿ ಆಳುವ ಸರ್ಕಾರಗಳು ಜಾರಿಗೆ ತಂದಿರುವ ಅಸಮರ್ಪಕ ಅಭಿವೃದ್ಧಿಯೋಜನೆಗಳಿಂದ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಪಿಡುಗಿನಂತೆ ಕಾಡುತ್ತಿರುವ ಮಕ್ಕಳ ಅಪೌಷ್ಟಿಕತೆ ಹಾಗೂ ಪ್ರಸವ ವೇಳೆಯಲ್ಲಿ ಸಂಭವಿಸುತ್ತಿರುವ ಮಹಿಳೆಯರ ಸಾವಿನ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. ಸೇನರ ಈ ಕೃತಿಯಲ್ಲಿ ಅಪೌಷ್ಟಿಕತೆಯಿಂದ ಸಾಯುತ್ತಿರುವ ಮಕ್ಕಳ ಬಗೆಗಿನ ಅಂಕಿ ಅಂಶ ಸಂಶಯ ಪಡುವಂತಹದ್ದು ಎಂದು ಕೆಲವು ಮಹನೀಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ, ಆದರೆ ಈ ಕೃತಿ ಕುರಿತು “Econamist“ ಪತ್ರಿಕೆಯಲ್ಲಿ ಜಾಗತಿಕ ಮಟ್ಟದ ಚರ್ಚೆಯಾಗುತ್ತಿದೆ. ಅಮಾತ್ರ‍್ಯ ಸೇನರು ಕೃತಿಯಲ್ಲಿ ದಾಖಲಿಸಿರುವ ಮಾಹಿತಿಗೆ ಪೂರಕವೆಂಬಂತೆ ‘ ೨೦೧೨ ರ “ State of World mother report ಬಿಡುಗಡೆಯಾಗಿದ್ದು ಇದು ಮನುಕುಲವನ್ನು ನಾಚಿಸುವಂತಿದೆ.
ಭಾರತದಲ್ಲಿ ಪ್ರತಿ ವರ್ಷ ನಾಲ್ಕು ಕೋಟಿ ಮಹಿಳೆಯರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಜನನ ನೀಡುತ್ತಿದ್ದಾರೆ. ಇವರುಗಳ ಅಪೌಷ್ಟಿಕತೆ ಮತ್ತು ಅವೈಜ್ಞಾನಿಕ ವಿಧಾನದ ಹೆರಿಗೆ ಪದ್ಧತಿಯಿಂದಾಗಿ ಭಾರತದಲ್ಲಿ ಪ್ರತಿ ತಿಂಗಳು ೮೦೦ ಮಹಿಳೆಯರು ಮತ್ತು ೮ ಸಾವಿರ ಮಕ್ಕಳು ಅಸು ನೀಗುತ್ತಿದ್ದಾರೆ. ಅಸು ನೀಗುತ್ತಿರುವ ಮಕ್ಕಳಲ್ಲಿ ಶೇಕಡ ೨೯ ರಷ್ಟು ಮಕ್ಕಳು ಮೊದಲ ದಿನ ಅಸು ನೀಗಿದರೆ, ಉಳಿದ ಶೇಕಡ ೪೩ ರಷ್ಟು ಮಕ್ಕಳು ಐದು ವರ್ಷದ ಅವಧಿಯೊಳಗೆ ಅಸು ನೀಗುತ್ತಿದ್ದಾರೆ. ಮಕ್ಕಳ ಸಾವಿನ ಪ್ರಮಾಣ ಭಾರತದ ಮಧ್ಯಪ್ರದೇಶದಲ್ಲಿ ಶೇಕಡ ೩೪, ಉತ್ತರಪ್ರದೇಶ ಮತ್ತು ಒರಿಸ್ಸಾದಲ್ಲಿ ಶೇಕಡ ೩೦ ರಷ್ಟು ಹಾಗೂ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಶೇಕಡ ೨೪ ರಷ್ಟು ಪ್ರಮಾಣದಲ್ಲಿದೆ. ಇದು ದೇಶದ ಅಂಕಿ ಅಂಶವಾದರೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಕರ್ನಾಟಕದ ಕೊಪ್ಪಳ ಜಿಲ್ಲೆಯ ಮಕ್ಕಳ ಸಾವು ಕುರಿತ ವರದಿ ನಿಜಕ್ಕೂ ಗಾಬರಿ ಮೂಡಿಸುವಂತಿದೆ. ೨೦೧೦ ರಲ್ಲಿ, ೭೬೨ ಮತ್ತು ೨೦೧೧ ರಲ್ಲಿ ೭೬೨ ಹಾಗೂ ೨೦೧೩ ರಲ್ಲಿ ೭೨೧ ಶಿಶು ಮರಣ ಸಂಭವಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ೧೭೩ ಮಕ್ಕಳು ಅಪೌಷ್ಟಿಕತೆಯಿಂದ ಅಸು ನೀಗಿದ್ದಾರೆ ಎಂದು ವರದಿ ಮಾಡಿರುವ ಇದೇ ಕನ್ನಡ ಪ್ರಭ ದಿನಪತ್ರಿಕೆ , “ಅವiತ್ರ‍್ರ್ಯ ಸೇನನೆಂಬ ಅಳಲೇಕಾಯಿ ಪಂಡಿತನ ಆರ್ಥಿಕ ನೀತಿಗಳು’ ಎಂಬ ಲೇಖನವನ್ನು ಸಹ ಪ್ರಕಟಿಸುತ್ತದೆ. ಇದನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ? (ವಿಶೇಶ್ವರ ಭಟ್ ಸಂಪಾದಕರಾಗಿದ್ದ ಸಮಯದಲ್ಲಿ ಇಂತಹ ಅವಿವೇಕತನಗಳು ಜರುಗಿದವು)
ಅಮರ್ತ್ಯ ಸೇನರ ಚಿಂತನೆಯಲ್ಲಾಗಲಿ, ಬದುಕಿನಲ್ಲಾಗಲಿ ಯಾವುದೇ ಧ್ವಂಧ್ವಗಳಿಲ್ಲ. ಅವರುದು ತೆರದ ಪುಸ್ತಕದಂತಹ ಬದುಕು ಎಂಬುದನ್ನು, ನೋಬೆಲ್ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಅವರು ಸ್ವತಃ ತಮ್ಮ ಬದುಕನ್ನು ಕುರಿತಾಗಿ ಬರೆದಿರುವ ಸಂಕಿಪ್ತ ಅತ್ಮ ಚರಿತ್ರೆಯನ್ನು ನೀವು ಗಮನಿಸ ಬಹುದು.
( ಗಾಂಧಿ ವಿಚಾರಧಾರೆ ಮತ್ತು ಅಭಿವೃದ್ಧಿಯ ಆತಂಕಗಳು ಕೃತಿಯ ಅಧ್ಯಾಯ)

Please follow and like us:
error