ಹೊಸದಿಲ್ಲಿ , : ಮಾಹಿತಿ ಹಕ್ಕು ಅರ್ಜಿ ( ಆರ್ಟಿಐ ) ದಾಖಲಿಸುವ ಅಗತ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರಿ ವಲಯದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ . ಕೇಂದ್ರ ಮಾಹಿತಿ ಆಯೋಗ ( ಸಿಐಸಿ ) ಯ 14ನೇ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿದ್ದ ಅಮಿತ್ ಶಾ , ಆರ್ಟಿಐ ಕಾಯ್ದೆಯು ಸರಕಾರ ಮತ್ತು ಜನರ ನಡುವಿನ ಸಂಪರ್ಕ ಸೇತುವಾಗಿದೆ . ಈ ಕಾಯ್ದೆಯನ್ನು
ರೂಪಿಸಿದ ಆರಂಭದಲ್ಲಿ ಇದರ ದುರ್ಬಳಕೆಯಾಗಬಹುದು ಎಂಬ ಭಯವಿತ್ತು . ಆದರೆ ಆರ್ಟಿಐ ಕಾಯ್ದೆಯಿಂದ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚು ಎಂಬುದು ಕಳೆದ 15 | ವರ್ಷದಿಂದ ಸಾಬೀತಾಗಿದೆ . ಪ್ರಧಾನಿ ಮೋದಿ ಸರಕಾರ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದು ಸರಕಾರಿ ವಲಯದ ಎಲ್ಲಾ ಕಾರ್ಯಗಳ ಮಾಹಿತಿಯನ್ನೂ ಜನತೆಗೆ ಶೀಘ್ರ ತಲುಪಿಸುವ ಉಪಕ್ರಮ ಆರಂಭಿಸಿದೆ . ಆದ್ದರಿಂದ ಜನರು ಆರ್ಟಿಐ ದಾಖಲಿಸುವ ಅಗತ್ಯವೇ ಇಲ್ಲದಂತಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ .