NRC ರಾಷ್ಟ್ರಾದ್ಯಂತ ಜಾರಿ – ಅಮಿತ್ ಷಾ

ಹೊಸದಿಲ್ಲಿ , ನ . 20 : ಅಸ್ಸಾಂನಲ್ಲಿ ಜಾರಿಗೆ ತಂದಿರುವ ನಾಗರಿಕರ ಪಟ್ಟಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿ ( ಎನ್‌ಆರ್‌ಸಿ ) ಪ್ರಕ್ರಿಯೆಯನ್ನು ರಾಷ್ಟ್ರಾದ್ಯಂತ ವಿಸ್ತರಿಸಲು 
ನಿರ್ಧರಿಸಲಾಗಿದೆ . ಯಾವುದೇ ಧರ್ಮದವರು ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ಸಂಸತ್ತಿನಲ್ಲಿ ಬುಧವಾರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ . ಪ್ರತಿಯೊಬ್ಬರನ್ನು ನಾಗರಿಕರ ಪಟ್ಟಿಗೆ ತರಲು ಇದೊಂದು ಕೇವಲ ಪ್ರಕ್ರಿಯೆಯಾಗಿದೆ . ಎನ್‌ಆರ್‌ಸಿಯನ್ನು ಇಡೀ ರಾಷ್ಟ್ರದಲ್ಲಿ ಜಾರಿಗೆ ತರಲಾಗುವುದು . ಅಸ್ಸಾಂನಲ್ಲಿ ಮತ್ತೊಮ್ಮೆ ಇದು ಜಾರಿಗೆ ಬರಲಿದೆ . ಯಾವ ಧರ್ಮದವರೂ ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ . ಅಸ್ಸಾಂ ನಾಗರಿಕರ ಪಟ್ಟಿಯಿಂದ 19 ಲಕ್ಷ ಜನರನ್ನು ಹೊರಗಿಡಲಾಗಿತ್ತು . ಹೆಚ್ಚಿನ ಜನರು ತಾವು ದೇಶದ ನಾಗರಿಕರು ಎಂದು ಸಾಬೀತುಪಡಿಸುವ ದಾಖಲೆಯನ್ನು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

Related posts