ದೆಹಲಿಯ ಹೋರಾಟನಿರತ ರೈತ ನಿರ್ಧಾರ :  ಡಿ.14 ರಿಂದ ಉಪವಾಸ ಸತ್ಯಾಗ್ರಹ

ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕಳೆದ 17 ದಿನಗಳಿಂದ ದೆಹಲಿಯ ಗಡಿಗಳಲ್ಲಿ ದಿಟ್ಟ ಹೋರಾಟಾ ನಡೆಸುತ್ತಿರುವ ರೈತರು ಇದೀಗ ಶಾಂತಿಯುತ ಉಪವಾಸ ಸತ್ಯಾಗ್ರಹದ ಮಾರ್ಗ ತುಳಿದಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್ ಆಂದೋ

ಲನ್‌ನ ಮುಖಂಡ ಕಮಲ್‌ ಪ್ರೀತ್‌ ಸಿಂಗ್ ಪನ್ನು‌, “ಸರ್ಕಾರವು 3 ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಾವು ಸರ್ಕಾರ ಸೂಚಿಸುತ್ತಿರುವ ತಿದ್ದುಪಡಿಗಳ ಪರವಾಗಿಲ್ಲ. ಕೇಂದ್ರ ಸರ್ಕಾರವು ನಮ್ಮ ಆಂದೋಲನವನ್ನು ಹಿಂಸಾತ್ಮಕವಾಗಿ ತಡೆಯಲು ಬಯಸಿದೆ. ಆದರೆ ನಾವು ಅದನ್ನು ಶಾಂತಿಯುತವಾಗಿ ಮುಂದುವರಿಸುತ್ತೇವೆ” ಎಂದಿದ್ದಾರೆ.

ನಮ್ಮ ಆಂದೋಲನವನ್ನು ವಿಫಲಗೊಳಿಸಲು ಕೇಂದ್ರದ ಯಾವುದೇ ಪ್ರಯತ್ನವನ್ನು ನಾವು ವಿಫಲಗೊಳಿಸುತ್ತೇವೆ. ನಮ್ಮನ್ನು ವಿಭಜಿಸಲು ಮತ್ತು ನಮ್ಮ ಚಳವಳಿಯ ಜನರನ್ನು ಪ್ರಚೋದಿಸಲು ಸರ್ಕಾರ ಕೆಲವು ಸಣ್ಣತನದ ಪ್ರಯತ್ನಗಳನ್ನು ಮಾಡಿತ್ತು. ಆದರೆ ನಾವು ಈ ಆಂದೋಲನವನ್ನು ಶಾಂತಿಯುತವಾಗಿ ವಿಜಯದತ್ತ ಕೊಂಡೊಯ್ಯುತ್ತೇವೆ ಎಂದು ಕಮಲ್ ಪ್ರೀತ್ ಸಿಂಗ್ ಪನ್ನು ತಿಳಿಸಿದ್ದಾರೆ.

ರಾಜಸ್ಥಾನದ ಶಹಜಹಾನ್ಪುರದಿಂದ ನಾಳೆ ಬೆಳಿಗ್ಗೆ 11 ಗಂಟೆಗೆ ಸಾವಿರಾರು ರೈತರು ಟ್ರ್ಯಾಕ್ಟರ್ ಮೆರವಣಿಗೆಯನ್ನು ಪ್ರಾರಂಭಿಸಿ ಜೈಪುರ-ದೆಹಲಿ ಮುಖ್ಯ ರಸ್ತೆಯನ್ನು ನಿರ್ಬಂಧಿಸಲಿದ್ದಾರೆ. ನಮ್ಮ ರಾಷ್ಟ್ರವ್ಯಾಪಿ ಕರೆಯ ನಂತರ, ಹರಿಯಾಣದ ಎಲ್ಲಾ ಟೋಲ್ ಪ್ಲಾಜಾಗಳು ಇಂದು ಉಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್ 14ರ ಸೋಮವಾರದಿಂದ ದೆಹಲಿಯ ಸಿಂಘು ಗಡಿ ಸೇರಿದಂತೆ ಉಳಿದ ಗಡಿಗಳಲ್ಲಿಯೂ ಸಹ ಏಕಕಾಲದಲ್ಲಿ ಎಲ್ಲಾ ರೈತ ಮುಖಂಡರು ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಕೇಂದ್ರ ಸರ್ಕಾರ ಈ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.

 

Please follow and like us:
error