8 ಯುಪಿ ಪೊಲೀಸರ ಹತ್ಯೆ ಪ್ರಕರಣ : ದರೋಡೆಕೋರ ವಿಕಾಸ್ ದುಬೆ ಬಂಧನ

ಜುಲೈ 3 ರಂದು ಕಾನ್ಪುರ ಬಳಿಯ ಬಿಕ್ರು ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರು ಹತ್ಯೆಯಾದಾಗಿನಿಂದ ದುಬೆ ಪರಾರಿಯಾಗಿದ್ದ.ಮಂಗಳವಾರ, ದರೋಡೆಕೋರ ವಿಕಾಸ್ ದುಬೆಯನ್ನು ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಬಂಧಿಸಲಾಗಿದೆ,

ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಕಲ್ ಪೊಲೀಸ್ ಠಾಣೆಯಲ್ಲಿ ದುಬೆ ಅವರನ್ನು ಬಂಧಿಸಲಾಗಿದೆ ಎಂದು ಯುಪಿ ವಿಶೇಷ ಕಾರ್ಯಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ದೃಡ ಪಡಿಸಿದ್ದಾರೆ.  ಶರಣಾಗಲು ದುಬೆ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಬಂಧನಕ್ಕೊಳಗಾಗಿದ್ದಾನೆ ಎಂದು ಅವರು ಹೇಳಿದರು.

“ಇದು ಪೊಲೀಸರಿಗೆ ದೊಡ್ಡ ಯಶಸ್ಸು, ವಿಕಾಸ್ ದುಬೆ ಕ್ರೂರ ಕೊಲೆಗಾರ.  ಸಂಪೂರ್ಣ ಮಧ್ಯಪ್ರದೇಶ ಪೊಲೀಸರು ಜಾಗರೂಕರಾಗಿದ್ದರು.  ಅವರನ್ನು ಉಜ್ಜಯಿನಿ ಮಹಕಲ್ ದೇವಸ್ಥಾನದಿಂದ ಬಂಧಿಸಲಾಗಿದೆ.  ನಾವು ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ, ”

Please follow and like us:
error