​ಚಿರತೆ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಅಕ್ಕ

ಉತ್ತರ ರಾಖಂಡ  : 11 ವರ್ಷದ ಬಾಲಕಿಯೊಬ್ಬಳು ಚಿರತೆ ದಾಳಿಯಿಂದ ತನ್ನ ತಮ್ಮನನ್ನು ರಕ್ಷಿಸಿ ಸಾಹಸ ತೋರಿದ ಪ್ರಕರಣ ವರದಿಯಾಗಿದೆ . ‘ ರಾಖಿ ತನ್ನ ನಾಲ್ಕು ವರ್ಷದ ತಮ್ಮನ ಜತೆ ಆಡುತ್ತಿದ್ದಾಗ ಚಿರತೆ ದಾಳಿ ನಡೆಸಿತುಕಮಲ . ಚಿರತೆಗೆ ಹೆದರದೆ , ತಕ್ಷಣ ಆಕೆ ತಮ್ಮನನ್ನು ರಕ್ಷಿಸಲು ಮುಂದಾಗಿದ್ಳು . ಈ ವೇಳೆಗೆ ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರಿಂದ ಚಿರತೆ ಓಡಿಹೋಯಿತು .  ಆ ವೇಳೆಗಾಗಲೇ ಚಿರತೆ ದಾಳಿಯಿಂದ ರಾಖಿಯ ಕುತ್ತಿಗೆಗೆ ಸಾಕಷ್ಟು ಗಾಯಗಳಾಗಿದ್ದವು . ತಮ್ಮ ಸುರಕ್ಷಿ ತವಾಗಿದ್ದಾನೆ ‘ ಎಂದು ಬಾಲಕಿಯ ಕುಟುಂಬದವರು ತಿಳಿಸಿದ್ದಾರೆ . – ಶೌರ್ಯ ಪ್ರಶಸ್ತಿಗೆ ರಾಖಿಯ ಹೆಸರು ಶಿಫಾರಸು ಮಾಡುವುದಾಗಿ ಪೌರಿ ಜಿಲ್ಲಾ  ಅಧಿಕಾರಿ ತಿಳಿಸಿದ್ದಾರೆ . 

 ‘ ರಾಖಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾ ಗಿತ್ತು . ಆದರೆ ಗಾಯದ ತೀವ್ರತೆ ಗಮನಿಸಿ ಹೆಚ್ಚು ಸೌಲಭ್ಯವುಳ್ಳ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದರು . ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊ ಯ್ಯಲಾಯಿತು . ಆದರೆ ಇಡೀ ದಿನ ಮನವಿ ಮಾಡಿದರೂ ವೈದ್ಯರು , ಚಿಕಿತ್ಸೆ ನೀಡಲು ನಿರಾಕರಿಸಿದರು . ನಂತರ ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾ ಯಿತು . ಸದ್ಯ ರಾಖಿ ಅಪಾಯದಿಂದ ಪಾರಾಗಿದ್ದಾಳೆ 

Please follow and like us:
error