೪೮ ಗಣ್ಯರ ವಿರುದ್ದ  ದೇಶದ್ರೋಹ ಪ್ರಕರಣ ರದ್ದುಗೊಳಿಸಿದ ಬಿಹಾರ ಫೋಲಿಸರು

ಬಿಹಾರ : ಹೆಚ್ಚುತ್ತಿರುವ ಮೊಬ್  ಲಿಂಚಿಂಗ್ ಪ್ರಕರಣಗಳನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಕೋರಿ ಜುಲೈನಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದ 49 ಮಂದಿ ಪ್ರಖ್ಯಾತ ಕಲಾವಿದರು ಮತ್ತು ಬುದ್ಧಿಜೀವಿಗಳ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣವನ್ನು ಮುಚ್ಚುವಂತೆ ಬಿಹಾರ ಪೊಲೀಸರು ಬುಧವಾರ ಆದೇಶಿಸಿದ್ದಾರೆ.  

ಮುಜಲ್ಲಾರ್‌ಪುರದ ಎಸ್‌ಎಸ್‌ಪಿ ಮಾರಿಯೋಜ್ ಕುರಾರ್ ಸಿನ್ಹಾ ಅವರು ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ .

 ಗುಂಪು ಹತ್ಯೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಬಿಹಾರ ಪೊಲೀಸರು ರದ್ದುಗೊಳಿಸಿದ್ದಾರೆ . ಇಷ್ಟೇ ಅಲ್ಲದೆ ದೂರುದಾರನ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ . ನಟಿ , ನಿರ್ದೇಶತಿ ಅಪರ್ಣಾ ಸೇನ್ , ರಾಮಚಂದ್ರ ಗುಹಾ , ಶ್ಯಾಮ್ ಬೆನಗಲ್ ಸೇರಿದಂತೆ ಪ್ರಧಾನಿಗೆ ಪತ್ರ ಬರೆದಿದ್ದ 49 | ಗಣ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು . ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು . 49 ಮಂದಿಯ ವಿರುದ್ಧ ನೀಡಿರುವ ದೂರು ‘ ದುರುದ್ದೇಶಪೂರಿತ ಸುಳ್ಳು ‘ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ವಕ್ತಾರರೊಬ್ಬರು , ಈ ಬಗ್ಗೆ ದೂರು ನೀಡಿದ ವ್ಯಕ್ತಿಯ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ . ‘ ಪಬ್ಲಿಸಿಟಿ ಗಳಿಸುವ ಉದ್ದೇಶದಿಂದ ಮಾತ್ರ ಈ ದೂರು ನೀಡಲಾಗಿತ್ತು ಎಂದವರು ಹೇಳಿದ್ದಾರೆ . ” 49 ಮಂದಿಯ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ದೂರುದಾರನ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್ ಎಸ್ ಪಿ ಸೂಚನೆ ನೀಡಿದ್ದಾರೆ ‘ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ . “ 

Please follow and like us:
error

Related posts