ಹೈದ್ರಾಬಾದ್ ರೇಪ್,ಕೊಲೆ ಪ್ರಕರಣದ ಆರೋಪಿಗಳು ಎನಕೌಂಟರ್ ಗೆ ಬಲಿ

ಹೈದರಾಬಾದ್ : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗು ಕೊಲೆ 

ಪ್ರಕರಣದ ಎಲ್ಲಾ 4 ಆರೋಪಿಗಳು ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ . ಮುಹಮ್ಮದ್ ಹಾರಿಸ್ , ಜೊಲ್ಲಾ ಶಿವ , ಜೊಲ್ಲಾ ನವೀನ್ ಹಾಗು ಕೇಶವುಲು ಈ ನಾಲ್ವರು ಆರೋಪಿಗಳು . ಇವರನ್ನು ಕಳೆದ ಶುಕ್ರವಾರ ಬಂಧಿಸಲಾಗಿತ್ತು .

ಬೆಳಗಿನ ಜಾವ ೩ :೩೦ ರ ಸುಮಾರಿಗೆ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಪೋಲಿಸರು ಕರೆದೊಯ್ದಿದ್ದರು ಆ ಸಂದರ್ಬದಲ್ಲಿ ಎನಕೌಂಟರ್ ನಡೆದಿದೆ ಎನ್ನಲಾಗಿದೆ.

Please follow and like us:
error