ಹಿಲರಿ ಕ್ಲಿಂಟನ್ ವಿರುದ್ಧ ಜಯಭೇರಿ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆ

Republican presidential candidate Donald Trump speaks to supporters as he takes the stage for a campaign event in Dallas, Monday, Sept. 14, 2015. (AP Photo/LM Otero)

ವಾಷಿಂಗ್ಟನ್, ನ.9: ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್(218 ಮತ) ವಿರುದ್ಧ ಜಯ ಸಾಧಿಸಿದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(276 ಮತ) ಅಮೆರಿಕದ 45ನೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

27 ರಾಜ್ಯಗಳಲ್ಲಿ ಒಟ್ಟು 276 ಇಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದಿರುವ 70 ವರ್ಷದ ಟ್ರಂಪ್ ಅವರು ಹಿಲರಿಗೆ ಆಘಾತಕಾರಿ ಸೋಲುಣಿಸಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು 270 ಇಲೆಕ್ಟೋರಲ್ ಕಾಲೇಜು ಮತಗಳ ಅಗತ್ಯವಿತ್ತು. ಹೆಚ್ಚುವರಿ ಆರು ಮತಗಳನ್ನು ಪಡೆದ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಟ್ರಂಪ್ 2017ರ ಜನವರಿ 20 ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಭಾರತೀಯ ಕಾಲಮಾನ ಮಂಗಳವಾರ ರಾತ್ರಿಯಿಂದ ಅಮೆರಿಕದಾದ್ಯಂತ ಅಧ್ಯಕ್ಷೀಯ ಚುನಾವಣೆ ಆರಂಭವಾಗಿದ್ದು, ಬುಧವಾರ ಬೆಳಗ್ಗೆಯೂ ಮತದಾನ ಮುಂದುವರಿದಿತ್ತು.

ಅಮೆರಿಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ 20 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದರು. ಅಮೆರಿಕದ 240 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ಇದೇ ಮೊದಲ ಬಾರಿಗೆ ಮಹಿಳೆಗೆ ಒಲಿಯಲಿದೆಯೇ? ಅಥವಾ ಶತಕೋಟ್ಯಧೀಶ ಉದ್ಯಮಿಗೆ ಒಲಿಯಲಿದೆಯೇ? ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಒಹಿಯೊ, ಫ್ಲೋರಿಡಾ ಹಾಗೂ ನಾರ್ತ್ ಕ್ಯಾರೊಲಿನಾ ರಾಜ್ಯಗಳಲ್ಲಿನ ಚುನಾವಣೆ ಹೋರಾಟದಲ್ಲಿ ಜಯ ಸಾಧಿಸಿದ್ದ ಟ್ರಂಪ್ 69ರ ಪ್ರಾಯದ ಹಿಲರಿ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದ್ದರು.

ಹಿಲರಿಗೆ ಯುಎಸ್ ಸೆನೆಟರ್ ಹಾಗೂ ಸೆಕ್ರಟರಿ ಆಫ್ ಸ್ಟೇಟ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆ. ಆದರೆ, ಟ್ರಂಪ್ ಸಂಸ್ಥೆಗಳ ಅಧ್ಯಕ್ಷರಾಗಿರುವ ಟ್ರಂಪ್ ಎಲ್ಲ ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿಷೇಧಿಸಬೇಕು, ಮೆಕ್ಸಿಕೊ ವಲಸಿಗರು ಕ್ರಿಮಿನಲ್‌ಗಳು, ಡ್ರಗ್ ಡೀಲರ್‌ಗಳು ಹಾಗೂ ರೇಪಿಸ್ಟ್‌ಗಳು ಎನ್ನುವ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಚುನಾವಣೆ ಪೂರ್ವದಲ್ಲಿ ಸುದ್ದಿಯಾಗಿದ್ದರು.

ಇಲಿನಾಯ್ಸನಿಂದ ಇದೇ ಮೊದಲ ಬಾರಿ ಯುಎಸ್ ಕಾಂಗ್ರೆಸ್‌ಗೆ ಕೃಷ್ಣಮೂರ್ತಿ ಚುನಾಯಿತರಾಗಿದ್ದಾರೆ. ಹೊಸದಿಲ್ಲಿಯಲ್ಲಿ ಜನಿಸಿರುವ ಕೃಷ್ಣಮೂರ್ತಿ ಮೂರರ ಹರೆಯದಲ್ಲಿ ಹೆತ್ತವರೊಂದಿಗೆ ಅಮೆರಿಕಕ್ಕೆ ಬಂದಿದ್ದರು.

ಅಮೆರಿಕದಲ್ಲಿ ಶಾಲಾ ಶಿಕ್ಷಣ ಪಡೆದಿದ್ದ ಕೃಷ್ಣಮೂರ್ತಿ ಅಲ್ಲಿಯೇ ಮೆಕಾನಿಕಲ್ ಎಂಜಿನಿಯರಿಂಗ್ ಅಧ್ಯಯನ ನಡೆಸಿದ್ದರು.

Republican presidential candidate Donald Trump speaks to supporters as he takes the stage for a campaign event in Dallas, Monday, Sept. 14, 2015. (AP Photo/LM Otero)
Republican presidential candidate Donald Trump speaks to supporters as he takes the stage for a campaign event in Dallas, Monday, Sept. 14, 2015. (AP Photo/LM Otero)
Please follow and like us:
error