ಹಿರಿಯ ರಂಗಭೂಮಿ ಕಲಾವಿದ  ನಾಡೋಜ ಏಣಗಿ ಬಾಳಪ್ಪಾ (೧೦೩) ಇನ್ನಿಲ್ಲ..

ಹಿರಿಯ ರಂಗಭೂಮಿ ಕಲಾವಿದ  ನಾಡೋಜ ಏಣಗಿ ಬಾಳಪ್ಪಾ (೧೦೩) ಇನ್ನಿಲ್ಲ.

ಮನೆಯಲ್ಲಿಯೆ ಶತಾಯುಷಿ ಬಾಳಪ್ಪ ಅವರಿಗೆ ಚಿಕಿತ್ಸೆ. ನೀಡಲಾಗುತ್ತಿತ್ತು.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮ.ನೂರಾರು ನಾಟಕ ಚನಲ ಚಿತ್ರದಲ್ಲಿ ಅಭಿಯಸಿರುವ ಹಿರಿಯ ಕಲಾವಿದ ಏಣಗಿ ಬಾಳಪ್ ವಿಧಿ ವಶ.

ಏಣಗಿ ಬಾಳಪ್ಪ :  ಕನ್ನಡ ವೃತ್ತಿರಂಗಭೂಮಿ ಕಂಡ ಅವಿಸ್ಮರಣೀಯ ಕಲಾವಿದ.
ಬೆಳಗಾವಿ ಜಿಲ್ಲೆಯ ‘ಸವದತ್ತಿ’ ತಾಲ್ಲೂಕಿನ ‘ಏಣಗಿ’ ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ ಬಾಳಪ್ಪನವರ ಬಾಲ್ಯ ಅಷ್ಟೇನೂ ಸುಖಕರವಾಗಿರಲಿಲ್ಲ. ಲೋಕುರ ಮನೆತನದ ಬಾಳಮ್ಮ ಹಾಗು ಕರಿಬಸಪ್ಪನವರ ಮಗನಾಗಿ ಜನಿಸಿದರು. ತಂದೆಯವರನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಹಣದ ಕೊರತೆಯಿಂದ ಮುಂದೆ ಶಾಲೆಗೆ ಸೇರಲು ಸಾಧ್ಯವಾಗಲಿಲ್ಲ. ಅವರ ಪಾಲಿಗೆ ಬೇಸಾಯ ಹಾಗೂ ಪಶುಪಾಲನೆ ಅವರ ಆದ್ಯತೆಯಾಯಿತು. ಹಳ್ಳಿಯ ಬಯಲಾಟ, ದೊಡ್ಡಾಟದ ಬಗ್ಗೆ ಒಲವು ಬೆಳೆಯಿತು. ಲವ-ಕುಶ ನಾಟಕ ನೋಡಿದ ಮೇಲೆ ಅವರ ಮನಸ್ಸೆಲ್ಲಾ ನಾಟಕದ ಪಾತ್ರಗಳಲ್ಲೇ ಸುತ್ತುತ್ತಿತ್ತು. ಆ ಆಟವನ್ನು ಆಯೋಜಿಲ್ಸಿದ ಗುರುಗಳನ್ನು ಬಾಳಪ್ಪನವರ ಮೈಕಟ್ಟು ಬಹಳ ಆಕರ್ಷಣೀಯವಾಗಿತ್ತು. ಸುಮಧುರ ಕಂಠದ ಸೇರುವಿಕೆಯಿಂದ ಅವರ ಪಾತ್ರಗಳಲ್ಲಿ ಪ್ರಭುದ್ಧತೆ ಕಾಣತೊಡಗಿತು. ತಮ್ಮ ೧೦ ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ರಂಗಮಂಚದ ಸವಿಕಂಡರು. ಅವರ ಮೈಮಾಟ ಸ್ತ್ರೀ ಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು. ಚಿಕ್ಕೋಡಿ ಸಿದ್ಧಲಿಂಗಸ್ವಾಮಿಗಳ ಕಂಪೆನಿಯ ’ಮಹಾನಂಜ’ ನಾಟಕದಲ್ಲಿ ಬಾಲನಟನಾಗಿ ಪ್ರಹ್ಲಾದನಾಗಿ, ಬಹಳ ಅದ್ಬುತ ಅಭಿನಯವನ್ನು ಕೊಟ್ಟರು. ಕೌಸಲ್ಯೆಯ ಪಾತ್ರದಲ್ಲಿ ಅವರು ಬಹಳ ಯಶಸ್ಸನ್ನು ಕಂಡರು. ಕಂಪೆನಿ ಮುಚ್ಚಿದಮೇಲೆ ‘ಅಬ್ಬಿಗೇರಿ ಕಂಪೆನಿ’ಗೆ ಸೇರಿ ಅಲ್ಲಿ ಬಾಲನಟನಾಗಿ ಕೆಲಸಮಾದಿದರು. ಅಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ನಾಟಕ’ ಬ್ರಿಟಿಷ್ ಸರಕಾರದ ವಿರೋಧದಿಂದ ಲೈಸೆನ್ಸ್ ಕಳೆದುಕೊಂಡು ಕಂಪೆನಿ ನಿಂತಿತು. ಊರಿಗೆ ಹೋಗಿ ನೆಲೆಸಲು ಮನಸ್ಸುಬರಲಿಲ್ಲ. ಸಿದ್ಧಲಿಂಗಸ್ವಾಮಿಗಳೇ ನಡೆಸುತ್ತಿದ್ದ ಮತ್ತೊಂದು ‘ಮಾರಿಕಾಂಬಾ ನಾಟಕ ಮಂಡಲಿ’ಗೆ ಅವರು ಸೇರಿದರು. ಚಿಕ್ಕವರಿದ್ದಾಗ ಊರಿನ ಭಜನಾ ಮಂಡಳಿಯಲ್ಲಿ ಸೇರಿಕೊಂಡು ಹಾಡುತ್ತಿದ್ದರು. ಗುರುಸಿದ್ದಯ್ಯ ಎಂಬುವವರು ಮೊತ್ತ ಮೊದಲಿಗೆ ಇವರನ್ನು ಸ್ಟೇಜ್ ಹತ್ತಿಸಿದರು. ಊರಲ್ಲೆ ನಡೆದ ‘ಲವ-ಕುಶ’ ಎಂಬ ನಾಟಕದಲ್ಲಿ ಲವನ ಪಾತ್ರ ಮಾಡುವ ಮೂಲಕ ರಂಗ ಪ್ರವೇಶವಾಯ್ತು. ಊರಿನ ಕಲಾವಿದರನ್ನೇ ಸೇರಿಸಿಕೊಂಡು ಆಡಿದ ‘ಪಾದುಕಾಪಟ್ಟಾಭಿಷೇಕ’ ನಾಟಕ ತುಂಬ ಯಶಸ್ವಿ ಆಯಿತು. ನಾಟಕ ಮಾಸ್ತರರಾಗಿದ್ದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಬಾಳಪ್ಪನವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಉದ್ಧರಿಸಿದರು. ಸ್ತ್ರೀ ಪಾತ್ರದ ಮೂಲಕವೇ ಇವರು ಪ್ರಸಿದ್ಧರಾದವರು. ‘ಕಿತ್ತೂರು ರುದ್ರಮ್ಮ’ ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರ. ೪೩೨ ಕ್ಕೂ ಅಧಿಕ ನಾಟಕ, ೧೨೩ ಅಧಿಕ ಕನ್ನಡ ಚಲನಚಿತ್ರಗಳಲ್ಲಿ ನಟನೆ.

Related posts