ಹೊಸದಿಲ್ಲಿ,ನ.18: ಬ್ಯಾಂಕುಗಳಲ್ಲಿ ಹಳೆಯ 500 ಮತ್ತು 1,000 ರೂ.ಗಳ ಬದಲಾಗಿ ಹೊಸನೋಟುಗಳ ವಿನಿಮಯವನ್ನು ನಿಲ್ಲಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಸರಕಾರಿ ಅಧಿಕಾರಿಗಳು ಇಂದಿಲ್ಲಿ ತಿಳಿಸಿದರು.
ಬ್ಯಾಕ್ ಕೌಂಟರ್ಗಳಲ್ಲಿ ನೋಟು ವಿನಿಮಯ ಅವಕಾಶವನ್ನು ದುರುಪಯೋಗಿಸಿಕೊಳ್ಳಲಾಗುತ್ತಿದೆ ಎಂಬ ಕಳವಳಗಳ ನಡುವೆಯೇ ಹಿರಿಯ ಸರಕಾರಿ ಮೂಲಗಳು ಈ ಸೌಲಭ್ಯವನ್ನು ನಿಲ್ಲಿಸಲು ಸರಕಾರವು ಪರಿಶೀಲಿಸುತ್ತಿದೆ ಎಂದು ಇಂದು ಬೆಳಿಗ್ಗೆ ಸುದ್ದಿಗಾರರಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ.
ಸಾರ್ವಜನಿಕರಲ್ಲಿ ಆತಂಕವನ್ನು ಹುಟ್ಟುಹಾಕಬಹುದಾದ ಯಾವುದೇ ಸಂಕೇತವನ್ನು ರವಾನಿಸಲು ಸರಕಾರವು ಬಯಸುತ್ತಿಲ್ಲ ಎಂದು ಹೇಳಿದ ಸರಕಾರದಲ್ಲಿನ ಮೂಲಗಳು, ನೋಟುಗಳ ವಿನಿಮಯ ಪ್ರಕ್ರಿಯೆಯಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ ಎಂದವು.
Please follow and like us: