FATHWA ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು- ಸಾಕ್ಷ್ಯಚಿತ್ರ

ಮುಸ್ಲಿಂ ಹೆಣ್ಣುಮಕ್ಕಳ ಪ್ರತಿಭೆ-ಆಸೆ-ಆಕಾಂಕ್ಷೆಗಳು ಕೊಲ್ಲಲ್ಪಡುತ್ತಿವೆ

ನನಗೆ ಡ್ಯಾನ್ಸ್ ಮಾಡುವುದಕ್ಕೆ ಇಷ್ಟವಿದೆ. ಆದರೆ, ಮದರಸಾ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಮಾಡಬಾರದೆಂದು ನಿರ್ಬಂಧಿಸಿದ್ದಾರೆ. ಆ ಕಾರಣಕ್ಕಾಗಿ ನಾನು ಡ್ಯಾನ್ಸ್ ಮಾಡುತ್ತಿಲ್ಲ. ಇದು ಆರನ ತರಗತಿಯ ವಿದ್ಯಾರ್ಥಿನಿಯೋರ್ವಳ ಮನದ ಮಾತು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳ ಈ ಹಕ್ಕನ್ನು ಧಾರ್ಮಿಕ ಶಾಲೆಯ ಗುರುಗಳು ಧರ್ಮದ ಹೆಸರಲ್ಲಿ ಕಸಿದುಕೊಳ್ಳುತ್ತಿದ್ದಾರೆ. ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನೃತ್ಯ ಮಾಡುವುದು ಜನರಿಗೆ ಅಶ್ಲೀಲವಾಗಿ ಕಾಣುತ್ತದೆ. ಆ ಕಾರಣಕ್ಕಾಗಿ ಹೆಣ್ಣುಮಕ್ಕಳು ನೃತ್ಯ ಮಾಡುವುದು ಇಸ್ಲಾಂ ನಿಶಿದ್ದ ಎನ್ನುತ್ತಾರೆ ಈ ಧಾರ್ಮಿಕ ಪಂಡಿತರು. ಮದರಸಾ ಗುರುಗಳ ಒತ್ತಡಕ್ಕೆ ಮಣಿದು ಪೋಷಕರು ಕೂಡಾ ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ನಡೆಯುವ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡುತ್ತಿಲ್ಲ. ಇಂತಹಾ ಬೆಳವಣಿಗೆಗಳನ್ನು ಕರಾವಳಿ ಭಾಗದಲ್ಲಿ ಕಾಣಬಹುದು. ಇದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಪ್ರತಿಭೆ-ಆಸೆ-ಆಕಾಂಕ್ಷೆಗಳು ಕೊಲ್ಲಲ್ಪಡುತ್ತಿವೆ. ಈ ಎಲ್ಲಾ ಸೂಕ್ಷ್ಮ ವಿಚಾರಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿ ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. – ಇರ್ಷಾದ್ ಉಪ್ಪಿನಂಗಡಿ.

 

Related posts

Leave a Comment