ಸ್ವಯಂ ಚಾಲಿತ ಚಾಲಕರಹಿತ ರೈಲು ಸೇವೆಗೆ ಪ್ರಧಾನಿ ಮೋದಿ ಚಾಲನೆ

ಹೊಸದಿಲ್ಲಿ : ದಿಲ್ಲಿ ಮೆಟ್ರೋದ ಮೆಜೆಂಟಾ ಮಾರ್ಗದಲ್ಲಿ ದೇಶದ ಮೊದಲ ಸಂಪೂರ್ಣ ಸ್ವಯಂ ಚಾಲಿತ ಚಾಲಕರಹಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು . ಈ ಹೊಸ ತಲೆಮಾರಿನ ರೈಲುಗಳ ಪ್ರಾರಂಭದೊಂದಿಗೆ ದಿಲ್ಲಿ ಮೆಟ್ರೋ ರೈಲು ನಿಗಮವು ವಿಶ್ವದ ಏಳು ಶೇಕಡಾ ಮೆಟ್ರೋ ನೆಟ್‌ವರ್ಕ್‌ಗಳ ಎಲೈಟ್ ಲೀಗ್‌ಗೆ ಪ್ರವೇಶಿಸಿದೆ . ಇದು ಚಾಲಕರು ಇಲ್ಲದೆ ಸೇವೆಗಳನ್ನು ನಿರ್ವಹಿಸಬಲ್ಲದು ಎಂದು ಡಿಎಂಆರ್‌ಸಿ ತಿಳಿಸಿದೆ . ” ಭಾರತವು ಸ್ಮಾರ್ಟ್ ಸಿಸ್ಟಮ್‌ಗಳತ್ತ ಎಷ್ಟು

ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎನ್ನುವುದನ್ನು ಇದು ತೋರಿಸುತ್ತಿದೆ . ದಿಲ್ಲಿ ಮೆಟ್ರೊವನ್ನು ಈಗ ನ್ಯಾಶನಲ್ ಕಾಮನ್ ಮೊಬಿಲಿಟಿ ಕಾರ್ಡ್ ( ಎನ್‌ಸಿಎಂಸಿ ) ಮೂಲಕ ಸಂಪರ್ಕಿಸಲಾಗಿದೆ . ಕೆಲವು ವರ್ಷಗಳ ಹಿಂದೆ ಸ್ಮಾರ್ಟ್ ಸಿಸ್ಟಮ್‌ಗಳತ್ತ ಹೆಚ್ಚು ಗಮನಹರಿಸಲಿಲ್ಲ . ಇದರಿಂದಾಗಿ ನಗರೀಕರಣ ಹಾಗೂ ತಾಂತ್ರಿಕ ಅಭಿವೃದ್ಧಿನಡುವೆ ಭಾರೀ ವ್ಯತ್ಯಾಸವನ್ನು ನಾವು ನೋಡಿದ್ದೇವೆ . ನಮ್ಮ ಸರಕಾರ ಅದನ್ನು ಬದಲಾಯಿಸಿತು ‘ ಎಂದು ಪ್ರಧಾನಮಂತ್ರಿ ಹೇಳಿದರು .

Please follow and like us:
error