ಸ್ಯಾಕ್ಸೋಫಾನ್ ಮಾಂತ್ರಿಕ ಕದ್ರಿ ಗೋಪಾಲನಾಥ್  ಇನ್ನಿಲ್ಲ 

ಮಂಗಳೂರು :  ಖ್ಯಾತ ಸಂಗೀತ ವಿದ್ವಾನ್, ಪದ್ಮಶ್ರೀ ಕದ್ರಿ ಗೋಪಾಲನಾಥ್(69) ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಸ್ಯಾಕ್ಸೋಫಾನ್ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಗೋಪಾಲನಾಥ್ ರು   ಅಲ್ಪಕಾಲದ 

ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ರು. ನಸುಕಿನ ನಾಲ್ಕು ಗಂಟೆಗೆ ವಿಧಿವಶರಾದ ಸಂಗೀತ ಮಾಂತ್ರಿಕ ಕದ್ರಿಯವರಿಗೆ 2004ರಲ್ಲಿ ಪದ್ಮಶ್ರೀ ಪುರಸ್ಕಾರ ದೊರೆತಿತ್ತು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಹಿತ ಮೂವರು ಮಕ್ಕಳನ್ನು ಹೊಂದಿದ್ದಾರೆ ಮೂಲತಃ ಮಂಗಳೂರಿನವರಾಗಿದ್ದ ಕದ್ರಿಯವರು ಚೆನ್ನೈಯಲ್ಲಿ ವಾಸವಾಗಿದ್ದರು. ಕದ್ರುಯವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾಗದ ನಷ್ಟವೇ ಸರಿ.

Please follow and like us:
error