ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಬಯೋಪಿಕ್ ವಿವಾದ

ನಾವು ಎಷ್ಟು ಅಸಹಿಷ್ಣುಗಳಾಗಿ ಬೆಳೆಯುತ್ತಿದ್ದೇವೆಂದರೆ ಮುಂದೆ ಸಿನಿಮಾ, ನಾಟಕ, ಸಂಗೀತ ಯಾವುದೂ ಸಾಧ್ಯವಿಲ್ಲದಂಥ ಶೂನ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ಶ್ರೀಲಂಕಾ ಕ್ರಿಕೆಟ್ ನ ಅದ್ಭುತ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರ ಕುರಿತಾಗಿ ತಮಿಳುನಾಡಿನ ಜನಪ್ರಿಯ ನಟ ವಿಜಯ್ ಸೇತುಪತಿ ಬಯೋಪಿಕ್ ಮಾಡುತ್ತಿದ್ದಾರೆ. ಸಿನಿಮಾದ ಪ್ರಚಾರದ ಪೋಸ್ಟರ್ ಗಳಲ್ಲಿ ಮುರುಳೀಧರನ್ ಪಾತ್ರಧಾರಿ ವಿಜಯ್ ಸೇತುಪತಿ ಶ್ರೀಲಂಕಾದ ಜೆರ್ಸಿ ಹಾಕಿರುವುದು ಈಗ ವಿವಾದವಾಗಿದೆ! ಅದಕ್ಕಾಗಿ ಬಾಯ್ ಕಾಟ್ ವಿಜಯ್ ಸೇತುಪತಿ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಶ್ರೀಲಂಕ ಸರ್ಕಾರ ತಮಿಳರ ನರಮೇಧ ಮಾಡಿತ್ತು, ಸೇತುಪತಿ ಶ್ರೀಲಂಕ ಜೆರ್ಸಿ ಹಾಕುವುದನ್ನು ನಾವು ಸಹಿಸುವುದಿಲ್ಲ ಎಂಬುದು ಕೆಲವರ ಗೋಳು. ಅಲ್ರಯ್ಯಾ, ಮುರುಳೀಧರನ್ ಬಯೋಪಿಕ್ ನಲ್ಲಿ ಅವರಿಗೆ ಪಾಕಿಸ್ತಾನದ, ಆಸ್ಟ್ರೇಲಿಯಾದ ಜೆರ್ಸಿ ತೊಡಿಸಲು ಸಾಧ್ಯವೇ? ಅಷ್ಟಕ್ಕೂ ಸಿನಿಮಾ ಇರೋದು ಮುರುಳೀಧರನ್ ಮತ್ತು ಆತನ ಕ್ರಿಕೆಟ್ ಕುರಿತಾಗಿ. ಮುರುಳೀಧರನ್ ಕೂಡ ಒಬ್ಬ ತಮಿಳಿಗ. ವಿಜಯ್ ಸೇತುಪತಿಯಂಥ ನಟರು ತಮಿಳು ಮಾತ್ರವಲ್ಲ ಯಾವುದೇ ಚಿತ್ರರಂಗಕ್ಕೆ ಒದಗಿ ಬರುವುದೂ ಅಪರೂಪ. ಹೀಗಿರುವಾಗ ತಮಿಳರ ಹೆಮ್ಮೆಗಳನ್ನೇ ಕೊಲ್ಲುವ ಕೆಲಸವನ್ನೇಕೆ ಮಾಡುತ್ತೀರಿ?

Please follow and like us:
error