ಕೋಶ ಓದಿ ನೋಡು ದೇಶ ಸುತ್ತಿ ನೋಡು
56 ವರ್ಷದ ‘ಮುಹಮ್ಮದ್ ಜಮಾಲ್ ಸೈಕಲ್’ ಇವರು ಸೈಕಲ್ ಪ್ರಿಯ ಪ್ರಯಾಣಿಕ, ಭಾರತ ದೇಶವನ್ನು, ದೇಶದ ಹೆಚ್ಚಿನ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನು ಸರಿ ಸುಮಾರು 2 ವರ್ಷಗಳಲ್ಲಿ ತನ್ನ ಪ್ರೀತಿಯ ಸೈಕಲಿನಲ್ಲೇ ಸಂಚರಿಸಿದ್ದಾರೆ. ಬರೋಬ್ಬರಿ 60000 ಕಿ.ಮೀ ದೂರ ಇಡೀ ಭಾರತ ಪರ್ಯಟನೆ ಮಾಡಿದ್ದಾರೆ. ಸೈಕಲ್ ಪ್ರಯಾಣ ಅಂದರೆ ಇವರಿಗೆ ಪಂಚಪ್ರಾಣ, ತನ್ನ ಹೆಸರಲ್ಲೇ ಸೈಕಲ್ ಎಂದು ಸೇರಿಸಿಕೊಂಡಿದ್ದಾರೆ. ತಂತ್ರಜ್ಞಾನಕ್ಕೆ ಮಾತ್ರ ಒಳಗಾಗುತ್ತಿರುವ ಜಗತ್ತಿನಲ್ಲಿ, ಪೆಟ್ರೋಲ್, ಡಿಸೇಲ್ ನ ಬೆಲೆ ಗಗನಕ್ಕೇರುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿವೂ ಕೂಡ ಪ್ರತಿನಿತ್ಯ 80 ಕಿ.ಮೀ ಸಂಚರಿಸುತ್ತಿದ್ದಾರೆ. ತನ್ನ ಈ ವಯಸ್ಸಿನಲ್ಲಿವೂ ಆರೋಗ್ಯವಂತನಾಗಿರಲು ಕಾರಣ ನನ್ನ ಸೈಕಲ್ ಪ್ರಯಾಣವೇ ಕಾರಣ ಅಂತಾರೆ #ಮುಹಮ್ಮದ್ #ಜಮಾಲ್ #ಸೈಕಲ್'

ದೇಶದ ಹೆಚ್ಚಿನ ಪ್ರಸಿದ್ದ ಆರಾಧನಾ ಕೇಂದ್ರವನ್ನು ಸಂದರ್ಶಿಸಿದ್ದಾರೆ, ಮಾತ್ರವಲ್ಲ ಸರ್ಕಾರದ 7 ದಿನದ ಅನುಮತಿಯೊಂದಿಗೆ ಅವರ ಸೈಕಲಿನ ಮೂಲಕವೇ ಪಾಕಿಸ್ತಾನಕ್ಕೆ ಬೇಟಿ ನೀಡಿದ್ದಾರೆ. ನಮ್ಮ ದೇಶದ ಸೌಹಾರ್ದಮಯ ಜೀವನವನ್ನು ಹಾಡಿ ಹೊಗಳಿದ್ದಾರೆ. ಇವರಿಗೆ ಯಾವುದೇ ಸ್ಥಿರ ಸಂಪತ್ತಿಲ್ಲ, ಜನರು ಇವರನ್ನು ಮೆಚ್ಚಿ ಇವರಿಗೆ ನಿಡುವ ಧಾನವೇ ಇವರ ಖರ್ಚುವೆಚ್ಚಕ್ಕಿರುವ ಮಾರ್ಗ, 50- 60 ಪಾಸಿನಲ್ಲಿ ರೋಗಕ್ಕೊಳಗಾಗುತ್ತಿರುವ ಜನರ ನಡುವೆ ಸೈಕಲ್ ತುಳಿಯುವ ಅಭ್ಯಾಸದಿಂದ ತನ್ನ ಆರೋಗ್ಯವನ್ನು ಸದೃಢವಾಗಿ ಕಾಪಾಡಿದ್ದಾರೆ. ಸೈಕ್ಲಿಂಗ್ ಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ ಅದರಿಂದ ಸಿಗುವ ಸಂತೋಷವೇ ಬೇರೆ ಅನ್ನುತ್ತಾರೆ. ಇನ್ನೂ ಹೆಚ್ಚಿನ ಪ್ರಮಾಣ ನಡೆಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ
