You are here
Home > Crime_news_karnataka > ಸಿಎಂ ಸಿದ್ದರಾಮಯ್ಯ-ಟಿಪ್ಪು ಅಶ್ಲೀಲ ಪೋಟೊ : ಕೇಸ್ ದಾಖಲು

ಸಿಎಂ ಸಿದ್ದರಾಮಯ್ಯ-ಟಿಪ್ಪು ಅಶ್ಲೀಲ ಪೋಟೊ : ಕೇಸ್ ದಾಖಲು

ಸಿಎಂ ಸಿದ್ದರಾಮಯ್ಯ ಮತ್ತು ಟಿಪ್ಪು ಸುಲ್ತಾನ್ ರ ಅಶ್ಲೀಲ ಪೋಟೋವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ನಲ್ಲಿ ಅಪ್ಲೋಡ್ ಮಾಡಿದ ಪೋಸ್ಟ್ ವೈರಲ್ ಆಗಿದೆ.

ಟಿಪ್ಪು ಸುಲ್ತಾನ್ ಜಯಂತಿಯನ್ನ ಮಾಡ ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಡೆಯನ್ನ ವಿರೋಧಿಸಿ ಈ ಅಸಹ್ಯಕರವಾದ ಪೋಟೋವನ್ನು ಹರಿಬಿಟ್ಟಿದ್ದಾರೆ. ಕುಸುಮಾ ಹರಿಜನ ಫೇಸ್‌ಬುಕ್‌ ನಲ್ಲಿ ಅಕ್ಟೋಬರ್ 24 ರಂದು ಪೋಸ್ಟ್ ಮಾಡಿದ್ದಾರೆ. ಮರುದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬೂದಗುಂಪಾ ಗ್ರಾಮದ ಎಬಿವಿಪಿ ಮುಖಂಡ ಪಂಪನಗೌಡ ಜಂತಗಲ್ ಷೇರ್ ಮಾಡಿದ್ದಾನೆ. ಇದನ್ನ ನೋಡಿದ ಕಾಂಗ್ರೆಸ್ ಕಾರ್ಯಕರ್ತರು, ಮುಖ್ಯಮಂತ್ರಿಗೆ ಮತ್ತು ಧಾರ್ಮಿಕ ಭಾವನೆಗಳಿ ಕುಂದುಂಟು ಮಾಡುತ್ತೆ ಅಂತ ಇವರಿಬ್ಬರ ಮೇಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಂಪನಗೌಡ ಜಂತಕಲ್ಲ ಪರಾರಿಯಾಗಿದ್ದಾನೆ.

Top