ಶಿಕ್ಷಣ ಕ್ಷೇತ್ರದ ನಿರ್ಲಕ್ಷ. ವಿಲೀನ ಮತ್ತು ಖಾಸಗೀಕರಣಕ್ಕೆ ಮುಂದಾದ ರಾಜ್ಯ ಬಜೆಟ್

**.

ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಮಂಡಿಸಿರುವ ರಾಜ್ಯ ಬಜೇಟನಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ನಿರ್ಲಕ್ಷ ತಾಳಲಾಗಿದೆ. ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ SFI ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.

ಕಳೆದ ಬಾರಿ 11:78 ರಷ್ಟು ಹಣ ಮೀಸಲಿಡಲಾಗಿತ್ತು. ಈ ಬಾರಿ 0.78% ರಷ್ಟು ಹಣವನ್ನು ಕಡಿತಗೊಳಿಸಿ ಕೇವಲ 11% ಮಾತ್ರ ಮೀಸಲಿರಿಸಿರುವುದು ಶಿಕ್ಷಣ ಕ್ಷೇತ್ರದ ಬಗ್ಗೆ ಸರಕಾರದ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.

ಶಾಲಾ, ಕಾಲೇಜ್ ಕಟ್ಟಡ ದುರಸ್ಥಿಗಾಗಿ ಕೇವಲ 150 ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಾಲಾ – ಕಾಲೇಜುಗಳು ಶಿಥಿಲಾವಸ್ಥೆಯಲ್ಲಿವೇ. ಇವುಗಳನ್ನು ದುರಸ್ಥಿಗೊಳಿಸಲು ಹಣ ಯಾವುದಕ್ಕೂ ಸಾಕಾಗುವುದಿಲ್ಲ.

*ಶಾಲೆಗಳ ವಿಲೀನದ ಹೆಸರಲ್ಲಿ ಮುಚ್ಚುವಿಕೆ*

ಕಡಿಮೆ ಹಾಜರಾತಿ ಇರುವ 28,847 ಸರಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ದಾಖಲಾತಿ ಹೆಚ್ಚಿಸುವ ಕುರಿತು ಯೋಜನೆ ಹಾಕುವ ಬದಲು ಮುಚ್ಚಲು ಮುಂದಾಗಿರುವುದು ನಾಡ ದ್ರೋಹದ ಕೆಲಸವಾಗಿದೆ. ಶಾಲೆ ವಿಲೀನದ ವಿರುದ್ದ SFI ರಾಜ್ಯವ್ಯಾಪಿ ಹೋರಾಟ ನಡೆಸಲಿದೆ.

*ಖಾಸಗೀಕರಣಕ್ಕೆ ದಾರಿ*
ಭದ್ರತಾ ಸಿಬ್ಬಂದಿಗೆ ತರಬೇತಿ ನೀಡುವುದಕ್ಕಾಗಿ ಶಿವಮೊಗ್ಗದಲ್ಲಿ “ತಾಯಿ ನಾಡು ಭದ್ರತಾ ವಿಶ್ವ ವಿಧ್ಯಾಲಯವನ್ನು ” ಖಾಸಗೀ ಸಹಭಾಗೀತ್ವದಲ್ಲಿ ತೆರೆಯುವ ಮೂಲಕ ರಾಜ್ಯದಲ್ಲಿ ಖಾಸಗೀ ವಿ.ವಿ.ಗಳನ್ನು ತೆರೆಯುವ ಕಾರ್ಪರೇಟ್ ಕಂಪನಿಗಳ ಪ್ರಸ್ಥಾಪಕ್ಕೆ ಜೀವ ತುಂಬಿರುವುದು ಅಪಾಯಕಾರಿ ಯೋಜನೆಯಾಗಿದೆ.

*ಉಚಿತ್ ಬಸ್ ಪಾಸ್ ನೀಡದೆ ವಂಚನೆ*
ಹಿಂದಿನ ಸರಕಾರ ರಾಜ್ಯ ಬಜೆಟ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿತ್ತು. ಅದನ್ನು ಈ ಬಜೇಟ್ ನಲ್ಲಿ ಹಣ ಮೀಸಲಿಡುವ ಮೂಲಕ ಜಾರಿ ಗೊಳಿಸುವುದಾಗಿ ಸರಕಾರ ಹೇಳಿತ್ತು.

ಆದರೆ ಉಚಿತ ಬಸ್ ಪಾಸ್ ನೀಡದೆ ವಿದ್ಯಾರ್ಥಿಗಳಿಗೆ ವಂಚಿಸಿರುವುದನ್ನು SFI ರಾಜ್ಯ ಸಮಿತಿಯು ಖಂಡಿಸುತ್ತದೆ.

ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ ಮಾಡಿರುವ ರಾಜ್ಯ ಬಜೆಟ್ ವಿರುದ್ಧ ಹೋರಾಟ ನಡೆಸುವಂತೆ SFI ರಾಜ್ಯ ಸಮಿತಿ ತನ್ನೆಲ್ಲ ಘಟಕಗಳಿಗೆ ಕರೆ ನೀಡಿದೆ ಎಂದು ರಾಜ್ಯ ಅಧ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ.

Please follow and like us: