ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು : ಎಲ್ಲಾ ಆರೋಪಿಗಳು ದೋಷಮುಕ್ತ

ಬಾಬರಿ ಮಸೀದಿ ಧ್ವಂಸ ಪ್ರಕರಣ

ಹೊಸದಿಲ್ಲಿ : ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪಿತ್ತಿದೆ . ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಪಿತೂರಿಯಾಗಿರಲಿಲ್ಲ , ಕೃತ್ಯ ಪೂರ್ವನಿಯೋಜಿತವಾಗಿರಲಿಲ್ಲ ಎಂದು ಹೇಳಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್ ಎಲ್ಲಾ 32 ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ . 32 ಆರೋಪಿಗಳ ಪೈಕಿ ಸಾಕ್ಷಿ ಮಹಾರಾಜ್ , ಸಾನ್ವಿ ರಿತಂಬರಾ , ವಿನಯ ಕಟಿಯಾರ್ , ಚಂಪತ್ ರಾಯ್ , ಪವನ್ ಪಾಂಡೆ ಸಹಿತ ಒಟ್ಟು 26 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು . ಎಲ್.ಕೆ.ಅಡ್ವಾಣಿ , ಎಂಎಂ ಜೋಶಿ , ಉಮಾ ಭಾರತಿ , ಕಲ್ಯಾಣ್ ಸಿಂಗ್ ಕೋರ್ಟಿಗೆ ಹಾಜರಾಗಿಲ್ಲ . ಎಲ್.ಕೆ. ಅಡ್ವಾಣಿ , ಮಾಜಿ ಕೇಂದ್ರ ಸಚಿವರಾದ ಮುರಳಿ ಮನ ಹರ ಶಿ ಮತ್ತು ಉಮಾ ಭಾರತಿಯವರಂತಹ ಹಿರಿಯ ಬಿಜೆಪಿ ನಾಯಕರು , ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್ , ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ , ಬಿಜೆಪಿ ನಾಯಕರಾದ ವಿನಯ ಕಟಿಯಾರ್‌ ಮತ್ತು ಸಾಧ್ಯೆ ರಿತಂಬರಾ ಪ್ರಕರಣದ ಆರೋಪಿಗಳಾಗಿದ್ದರು . ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು . ಒಟ್ಟು 48 ಜನರ ವಿರುದ್ಧ ಆರೋಪಗಳನ್ನು ರೂಪಿಸಲಾಗಿತ್ತಾದರೂ , ಅವರ ಪೈಕಿ 16 ಆರೋಪಿಗಳು ವಿಚಾರಣೆಯ ಅವಧಿಯಲ್ಲಿ ನಿಧನರಾಗಿದ್ದಾರೆ .

Please follow and like us:
error