ವಿಮಾನದಲ್ಲಿ ಅಸ್ವಸ್ಥ ವೃದ್ದನ ಮೂತ್ರವನ್ನು ಬಾಯಿಯ ಮೂಲಕ ಹೀರಿ ಜೀವ ಉಳಿಸಿದ ವೈದ್ಯ

ಬೀಜಿಂಗ್‌ : ಚೀನಾದ ಗುವಾಂಗ್ ನಿಂದ ನ್ಯೂಯಾರ್ ಗೆ | ಹೊರಟಿದ್ದ ಚೈನಾ ಸದರ್ನ್ ಏರ್ ವೇಸ್ ವಿಮಾನದಲ್ಲಿ 

ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರೊಬ್ಬರಿಗೆ ಮೂತ್ರ ಕಟ್ಟಿದ ಪರಿಣಾಮ ವಿಮಾನದಲ್ಲಿದ್ದ ವೈದ್ಯರೊಬ್ಬರು ಮೂತ್ರವನ್ನು ಟ್ಯೂಬ್ ಒಂದರ ಸಹಾಯದಿಂದ ತಮ್ಮ ಬಾಯಿಯ ಮೂಲಕ 30 ನಿಮಿಷಗಳ ಕಾಲ ಹೀರಿ ಹೊರ ಹಾಕಿ ಅವರ ಪ್ರಾಣ ಉಳಿಸಿದ್ದಾರೆ . ವಿಮಾನ ತನ್ನ ನಿಲ್ದಾಣ ತಲುಪಲು ಆರು ಗಂಟೆಗಳಷ್ಟಿರುವಾಗ ಹಿರಿಯ ನಾಗರಿಕ ಅಸ್ವಸ್ಥರಾಗಿದ್ದರಲ್ಲದೆ ಬೆವರಿ ಹೋಗಿದ್ದರು . ಹಾಗೂ ತಮಗೆ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು . ವಿಮಾನದ ಸಿಬ್ಬಂದಿ ತಕ್ಷಣ ಅವರಿಗೊಂದು ತಾತ್ಕಾಲಿಕ ಹಾಸಿಗೆ ಏರ್ಪಾಟು ಮಾಡಿದರಲ್ಲದೆ ವೈದ್ಯಕೀಯ ಸಹಾಯ ಬೇಕೆಂದು ಘೋಷಿಸಿದರು . ವಿಮಾನದಲ್ಲಿದ್ದ ವ್ಯಾಸ್ಕುಲಾರ್ ಸರ್ಜನ್ ಡಾ . ಝಂಗ್ ತಕ್ಷಣ ಮುಂದೆ ಬಂದರು . ಆ ವ್ಯಕ್ತಿಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದ್ದು ಅದನ್ನು ವಿಸರ್ಜಿಸಲು ಸಾಧ್ಯವಾಗುತ್ತಿಲ್ಲ ಎಂದು ಅರಿವಾಗುತ್ತಲೇ ವಿಮಾನದಲ್ಲಿ ಲಭ್ಯವಿದ್ದ ಪೋರ್ಟೇಬಲ್ ಆಕ್ಸಿಜನ್ ಮಾಸ್ಟ್ , ಸಿರಿಂಜ್ ನೀಡಲ್ , ಸ್ವಾ ಹಾಗೂ ಟೇಪ್ ತೆಗೆದುಕೊಂಡರು . ಆರಂಭದಲ್ಲಿ ಸಿರಿಂಜ್‌ ಬಳಸಿ ಮೂತ್ರ ಹೊರಹಾಕಲು ಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ವೈದ್ಯ ಟ್ಯೂಬ್ ಒಂದರ ಸಹಾಯದಿಂದ ತನ್ನ ಬಾಯಿಯ ಮೂಲಕ ಮೂತ್ರವನ್ನು ಹೀರಲು ಆರಂಭಿಸಿದರು . ಮುಂದಿನ 37 ನಿಮಿಷಗಳಲ್ಲಿ ಅವರು ಸುಮಾರು 700ರಿಂದ 80೧ ಮಿಲಿಲೀಟರ್‌ ಮೂತ್ರ ಹೀರಿ ಹೊರ ಹಾಕಿದ್ದರು . ವಿಮಾನ ಭೂಸ್ಪರ್ಶ ಮಾಡಿದ ನಂತರ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು .

Please follow and like us:
error