ವಿದ್ಯಾರ್ಥಿಗಳು ದಾಳಿ ಮಾಡಿದ್ದಾರೆ ಜೆಎನ್ ಯು ಕುಲಪತಿ ದೂರು

ಹೊಸದಿಲ್ಲಿ , ಡಿ . 15 : ಜವಾಹರಲಾಲ್ ನೆಹರೂ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಕುಲಪತಿ ಎಂ . ಜಗದೀಶ್‌ ಕುಮಾರ್‌ ದೂರು ನೀಡಿದ್ದಾರೆ . ” ನಾನು ಆಡಳಿತ ಕಚೇರಿಯಿಂದ ಇತರ ಅಧಿಕಾರಿಗಳ ಜತೆ ಹೋಗುತ್ತಿದ್ದಾಗ ಉದ್ರಿಕ್ತ ವಿದ್ಯಾರ್ಥಿಗಳು ನನ್ನನ್ನು 
ಸುತ್ತುವರಿದರು . . . ನನ್ನ ಮೇಲೆ ಹಲ್ಲೆ ನಡೆಸುವ ಪ್ರಯತ್ನವನ್ನೂ ಮಾಡಿದ ವಿದ್ಯಾರ್ಥಿಗಳು ನನ್ನ ಕೈ ಹಾಗೂ ಬಟ್ಟೆ ಎಳೆದರು ‘ ಎಂದು ಹೇಳಿದ್ದಾರೆ . ‘ ‘ ನಾನು ವಾಹನ ಏರಿದಾಗ , ವಿದ್ಯಾರ್ಥಿಗಳು ಕೀ ಕಿತ್ತುಕೊಂಡರು . ಚಾಲಕನ ಸಮಯಪ್ರಜ್ಞೆಯಿಂದ ಮತ್ತೊಂದು ವಾಹನದಲ್ಲಿ ಅಲ್ಲಿಂದ ಹೋಗುವುದು ಸಾಧ್ಯವಾಯಿತು ‘ ಎಂದು ಸ್ಪಷ್ಟಪಡಿಸಿದ್ದಾರೆ . ವಿದ್ಯಾರ್ಥಿಗಳು ತಮ್ಮ ಕಚೇರಿಯನ್ನು ಧ್ವಂಸಗೊಳಿಸಿದ್ದಾಗಿಯೂ ಅವರು ಅಪಾದಿಸಿದ್ದಾರೆ . ವಿದ್ಯಾರ್ಥಿಗಳನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಮೂಲಕ ಪತ್ತೆ ಮಾಡಲಾಗುವುದು . ಇದು ಅಪರಾಧ ಕೃತ್ಯವಾಗಿದ್ದು , ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ವಿವರಿಸಿದ್ದಾರೆ . ಕಳೆದ ಒಂದು ತಿಂಗಳಿಂದ ಆಡಳಿತ ಕಚೇರಿ ವಿದ್ಯಾರ್ಥಿಗಳ ವಶದಲ್ಲಿದ್ದು , ಆಡಳಿತ ಕಚೇರಿಗೆ ಕುಲಪತಿ ಹಾಗೂ ಇತರ ಅಧಿಕಾರಿಗಳು ಬರುವ ವೇಳೆ ಸೂಕ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು . ‘ 

Please follow and like us:
error