ವಾರಣಾಸಿಯಿಂದ ತೇಜ್ ಬಹದ್ದೂರ್ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾಧಿಕಾರಿ

ವಾರಣಾಸಿ: ವಾರಣಾಸಿಯ ಸಮಾಜವಾದಿ ಪಕ್ಷದ ಅಭ್ಯರ್ಥಿ, ಕಳಪೆ ಆಹಾರದ ಬಗ್ಗೆ ವೀಡಿಯೋ ಪೋಸ್ಟ್ ಮಾಡಿ ಬಿಎಸ್‍ಎಫ್ ನಿಂದ ವಜಾಗೊಂಡಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಬುಧವಾರ ತಿರಸ್ಕರಿಸಿದ್ದಾರೆ.

ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತೇಜ್ ಬಹಾದುರ್ ನನ್ನು ತನ್ನ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷ ಘೋಷಿಸಿತ್ತು. ಸಮಾಜವಾದಿ ಪಕ್ಷ ಈ ಹಿಂದೆ ಶಾಲಿನಿ ಯಾದವ್ ಅವರನ್ನು ಇಲ್ಲಿಂದ ಕಣಕ್ಕಿಳಿಸಿತ್ತು.

Please follow and like us:
error