ಲೋಕಸಭೆಯಲ್ಲಿ ಗೊಡ್ಡೆ ‘ ದೇಶಭಕ್ತ ‘ ಎಂದು ಬಣ್ಣಿಸಿದ ಪ್ರಜ್ಞಾಸಿಂಗ್ 

  ಹೊಸದಿಲ್ಲಿನ   : ಲೋಕಸಭೆಯಲ್ಲಿ ಬುಧವಾರ ನಡೆದ ಕಲಾಪದ ವೇಳೆ ಮಹಾತ್ಮ ಗಾಂಧೀಜಿಯವರ ಹಂತಕ ನಾಥುರಾಮ್ 

ಗೋಡ್ಡೆಯನ್ನು ‘ ದೇಶಭಕ್ತ ‘ ನೆಂದು ಉಲ್ಲೇಖಿಸಿದ್ದಕ್ಕೆ ಪ್ರತಿಪಕ್ಷಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಯಿತು . ವಿಶೇಷ ರಕ್ಷಣಾ ತಂಡ ( ತಿದ್ದುಪಡಿ ) ವಿಧೇಯಕದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಂದರ್ಭ ಡಿಎಂಕೆ ಸಂಸದ ಎ . ರಾಜಾ ಅವರು ಮಹಾತ್ಮಾ ಗಾಂಧೀಜಿ ಅವರನ್ನು ತಾನು ಯಾಕೆ ಕೊಂದೆ ಎಂಬ ಬಗ್ಗೆ ನಾಥುರಾಮ್  ಗೋಡ್ಸೆ  ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು . ತಾನು 32 ವರ್ಷಗಳಿಂದ ಗಾಂಧೀಜಿ ವಿರುದ್ಧ ದ್ವೇಷಭಾವನೆಯನ್ನು ಹೊಂದಿದ್ದು , ಅಂತಿಮವಾಗಿ ಅವರನ್ನು ಹತ್ಯೆಗೈಯಲು ನಿರ್ಧರಿಸಿದ್ದಾಗಿ ಗೋಡ್ನ ಖುದ್ದಾಗಿ ಒಪ್ಪಿಕೊಂಡಿದ್ದಾರೆಂದು ರಾಜಾ ತಿಳಿಸಿದರು . ಗೊಡ್ಡೆ ನಿರ್ದಿಷ್ಟ ಸಿದ್ದಾಂತವೊಂದರಲ್ಲಿ ನಂಬಿಕೆಯಿರಿಸಿದ್ದರಿಂದ ಆತ ಗಾಂಧೀಜಿಯವರನ್ನು ಹತ್ಯೆಗೈದನೆಂದು ರಾಜಾ ಹೇಳಿದರು . ಆಗ ಮಧ್ಯಪ್ರವೇಶಿಸಿದ ಪ್ರಜ್ಞಾಸಿಂಗ್ ಠಾಕೂರ್ , ” ನೀವು ದೇಶಭಕ್ತನನ್ನು ಉದಾಹರಣೆಯಾಗಿ ನೀಡಕೂಡದು ‘ ಎಂದು ಹೇಳಿದರು . ಕೂಡಲೇ ಪ್ರತಿಪಕ್ಷಗಳ ಸದಸ್ಯರು ಠಾಕೂರ್ ಅವರ ಮಧ್ಯಪ್ರವೇಶಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು . ಆಗ ಬಿಜೆಪಿ ಸದಸ್ಯರು ಆಕೆಯನ್ನು ಆಸನದಲ್ಲಿ ಕುಳಿತುಕೊಳ್ಳುವಂತೆ ಮನವೊಲಿಸಿದರು . ವ್ಯಕ್ತಿಗೆ ನೀಡುವ ಭದ್ರತೆಯು ಆತ ಎದುರಿಸುತ್ತಿರುವ ಬೆದರಿಕೆಯ ಅಂಶವನ್ನು ಆಧರಿಸಿರಬೇಕೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ ಎಂದು ಅಭಿಪ್ರಾಯಿಸಿದರು . ಪ್ರಧಾನಿಯವರನ್ನು ಹೊರತುಪಡಿಸಿ ಉಳಿದವರಿಗೆ ಎಸ್‌ಪಿಜಿ ಭದ್ರತೆಯನ್ನು ಹಿಂತೆಗೆದುಕೊಳ್ಳುವ ವಿಧೇಯಕವನ್ನು ಮರುಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವರನ್ನು ರಾಜಾ ಅವರು ಆಗ್ರಹಿಸಿದರು .

Please follow and like us:
error