ರೈಲಿನಿಂದ ಬಿದ್ದು ಒಡಿಶಾದ ಮಾಜಿ ಸಚಿವ ಮೃತ್ಯು

railಭುವನೇಶ್ವರ, ಡಿ.6: ರೈಲಿನಿಂದ ಬಿದ್ದು ಒಡಿಶಾದ ಮಾಜಿ ಸಚಿವರೊಬ್ಬರು ಮೃತಪಟ್ಟ ಘಟನೆ ನುವಾಪಾಡ ಜಿಲ್ಲೆಯ ಖಾರಿಯರ್ ರೋಡ್ ರೈಲ್ವೇ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಮಾಜಿ ಸಚಿವ ಲಲಿತ್ ಮೋಹನ್ ಗಾಂಧಿ ಅವರು ಪುರಿ-ದುರ್ಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ತನ್ನ ಊರು ಟಿಟ್ಲಾಗರ್‌ನಿಂದ ರಾಯ್‌ಪುರಕ್ಕೆ ತೆರಳುತ್ತಿದ್ದಾಗ ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ.
ಟಿಟ್ಲಾಗರ್‌ನಲ್ಲಿ ರೈಲು ಏರಿದ್ದ ಲಲಿತ್ ಮೋಹನ್ ಗಾಂಧಿ ಅವರು ಖಾರಿಯಾರ್‌ನಲ್ಲಿ ರೈಲು ನಿಂತಾಗ , ಚಹಾ ಕುಡಿಯಲು ರೈಲಿನಿಂದ ಇಳಿದ್ದರು. ಬಳಿಕ ಅವರು ರೈಲು ಹೊರಡುತ್ತಿದ್ದತೆ ರೈಲು ಹತ್ತುವ ಹತ್ನದಲ್ಲಿ ಕಾಲು ಜಾರಿ ರೈಲಿನಡಿಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮಾಜಿ ಕಾಂಗ್ರೆಸ್ ಧುರೀಣ 1977ರಲ್ಲಿ ಲಲಿತ್ ಮೋಹನ್ ಗಾಂಧಿ 1977ರಲ್ಲಿ ಮೊದಲ ಬಾರಿ ವಿಧಾನ ಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1980ರಲ್ಲಿ ಎರಡನೆ ಬಾರಿ ಆಯ್ಕೆಯಾಗಿ ವಾರ್ತಾ ಮತ್ತು ಪ್ರಚಾರ, ಸಾರ್ವಜನಿಕ ಸಂಪರ್ಕ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರು ರಾಜಕೀಯದಿಂದ ದೂರವಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು

Please follow and like us:
error