ರೈತರ ಪ್ರತಿಭಟನೆ 25ನೇ ದಿನಕ್ಕೆ : ಉತ್ತರಪ್ರದೇಶ ಗಡಿ ಬಂದ್ ಮಾಡುವ ಎಚ್ಚರಿಕೆ

ಹೊಸದಿಲ್ಲಿ : ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು 25 ನೇ ದಿನಕ್ಕೆ ಕಾಲಿಟ್ಟಿದೆ . ಪ್ರತಿಭಟನಾಕಾರರು ರಾಷ್ಟ್ರರಾಜಧಾನಿ ಹಾಗೂ ಉತ್ತರಪ್ರದೇಶ ನಡುವಿನ ಗಾಝಿಪುರ ಗಡಿಯನ್ನು ಮುಚ್ಚುವ ಬೆದರಿಕೆ ಹಾಕಿದ್ದಾರೆ . ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಕುರಿತು ಸರಕಾರ ಭರವಸೆ ನೀಡುತ್ತಿರುವ ನಡುವೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ . ಶನಿವಾರ ಪ್ರಧಾನಮಂತ್ರಿ ನರೇಂದ ಮೋದಿ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ . ನವೆಂಬರ್ ಅಂತ್ಯಕ್ಕೆ ಸಾವಿರಾರು ರೈತರು ದಿಲ್ಲಿ ಗಡಿ ಭಾಗದಲ್ಲಿ ಪ್ರತಿಭಟನೆ ಆರಂಭಿಸಿದ ಬಳಿಕ 20 ಕ್ಕೂ ಅಧಿಕ ರೈತರು ಮೃತಪಟ್ಟಿದ್ದು , ಪ್ರತಿಭಟನಾಕಾರರು ಇಂದು ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಿದ್ದಾರೆ .

Please follow and like us:
error