ರಿಯೋ ಒಲಂಪಿಕ್ಸ್​-2016 ವಿಶೇಷತೆಗಳು

ಇನ್ನೆನೋ ರಿಯೋ ಒಲಂಪಿಕ್ಸ್ ಆರಂಭವಾಗಲಿದೆ. ಆದರೆ ರಿಯೋ ಒಲಿಂಪಿಕ್ಸ್ನ್ಲಲಿರುವ ಕೆಲವು ವಿಶೇಷತೆಗಳು ಮತ್ತು ಕಳೆದ ಎಲ್ಲ ಒಲಿಂಪಿಕ್ಸ್ಗಳಿಗಿಂತ ರಿಯೋ ಹೇಗೆ ಭಿನ್ನವಾಗಿದೆ. ಮೊಟ್ಟಮೊದಲ ಬಾರಿಗೆ ದಕ್ಷಿಣ ಆಮೆರಿಕದಲ್ಲಿ ಹಾಗೂ ಬ್ರೆಜಿಲ್ಲಿನಲ್ಲಿ ಒಲಿಂಪಿಕ್ಸ್ ಆಯೋಜನೆಗೊಂಡಿದೆ. ಆಗಸ್ಟ್ 5 ರಿಂದ 21ರ ತನಕ ನಡೆಯುವ ರಿಯೋ ಒಲಂಪಿಕ್ಸ್ನಲ್ಲಿ 11 ಸಾವಿರಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 206 ರಾಷ್ಟ್ರಗಳು ಭಾಗವಹಿಸುತ್ತಿದ್ದು, 28 ವಿವಿದ ಕ್ರೀಡೆಗಳಲ್ಲಿ , 41 ವಿಭಾಗದಲ್ಲಿ, ಒಟ್ಟು 308 ಇವೆಂಟ್ಗಳು ನಡೆಯಲಿವೆ.ಒಟ್ಟು 2488 ಪದಕಗಳಿಗಾಗಿ ಸ್ಪರ್ಧೆ : 2,488 ಪದಕಗಳಿಗಾಗಿ ಕ್ರೀಡಾಪಟುಗಳು ಸೆಣಸಲಿದ್ದಾರೆ. ಇದರಲ್ಲಿ 812 ಚಿನ್ನ, 812 ಬೆಳ್ಳಿ ಹಾಗೂ 864 ಕಂಚಿನ ಪದಕಗಳು ವಿಜೇತರ ಕೈಗೆ ಸೇರಲಿವೆ. ದಾಖಲೆಯೆಂಬಂತೆ 120 ಭಾರತದ ಅಥ್ಲೀಟ್ಗಳು ಈ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವುದು. ಭಾರತದ ಪಾಳಿಗೆ ದೊಡ್ಡ ಸಾಧನೆಯಾಗಿದೆ.ರಿಯೋ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ನ ಒಂದೇ ವಿಭಾಗದಲ್ಲಿ ಒಟ್ಟು 141 ಪದಕಗಳನ್ನು ವಿತರಿಸಲಾಗುವುದು. 47 ಚಿನ್ನದ ಪದಕಗಳು ಇಲ್ಲಿ ವಿತರಿಸಲಾಗುವುದು. ಈ ಕ್ರೀಡಾಕೂಟಗಳು ಅತಿಥೇಯ ನಗರದ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ ಸೇರಿದಂತೆ ನಗರದ ಐದು ಸ್ಥಳಗಳಲ್ಲಿ ನಡೆಯಲಿವೆ. ಬೆಲೊ ಹಾರಿಜಾಂಟೆ, ರಿಯೋ ಡಿ ಜನೈರೊ, ಸಾಲ್ವಡಾರ್ ಮತ್ತು ಮನಾಸ್ಗಳಲ್ಲಿ ಕ್ರೀಡಾಕೂಟಗಳು ನಡೆಯಲಿವೆ.ರಿಯೋ ಚಿನ್ನದ ಪದಕದಲ್ಲೇನಿದೆ : ರಿಯೋ ಒಲಂಪಿಕ್ಸ್ಗಾಗಿ ತಯಾರಾಗಿರುವ ಚಿನ್ನದ ಪದಕದಲ್ಲಿ 495 ಗ್ರಾಂ ಬೆಳ್ಳಿ ಇದ್ದರೆ ಕೇವಲ 6 ಗ್ರಾಂ ಬಂಗಾರವಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 587 ಡಾಲರ್ ಅಂದ್ರೆ ಸುಮಾರು 39 ಸಾವಿರ ರೂಪಾಯಿ. 1912ರಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಸಂಪೂರ್ಣ ಚಿನ್ನದಿಂದ ಪದಕವನ್ನು ಸಿದ್ಧಪಡಿಸಲಾಗಿತ್ತಂತೆ.ವಿಶ್ವ ಶ್ರೇಷ್ಠ ಮರಕಾನ ಸ್ಟೇಡಿಯಂನ: ಮರಕಾನ ಸ್ಟೇಡಿಯಂನಲ್ಲಿ 2016 ರಿಯೋ ಒಲಿಂಪಿಕ್ಸ್ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಮಾರು 78,000 ಪ್ರೇಕ್ಷಕರು ಕೂಡುವ ಸಾಮರ್ಥ್ಯ ಹೊಂದಿರುವ ಬಹುದೊಡ್ಡ ಮೈದಾನ ಇದಾಗಿದೆ.ರಿಯೋನಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ: ಇದೇ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಗಾಲ್ಫ್ ಮತ್ತು ರಗ್ಬಿ ಆಟವನ್ನು ಸೇರ್ಪಡೆ ಮಾಡಿರುವುದು ರಿಯೋದ ಮತ್ತೊಂದು ವಿಶೇಷವೆನಿಸಿದೆ. ಇಲ್ಲಿವರೆಗೆ ಈ ಕ್ರೀಡೆಗಳಿಗೆ ಒಲಿಂಪಿಕ್ಸ್ ಗಳಲ್ಲಿ ಅವಕಾಶ ನೀಡಿರಲಿಲ್ಲ. ಆದರೆ, ಅಗ್ರಗಣ್ಯ ಗಾಲ್ಫ್ ಪಟುಗಳು ಟೂರ್ನಿಯಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ.riiioಹಲವು ತೊಂದರೆಗಳಿದ್ರು ಬ್ರೇಜಿಲ್ ಅಚ್ಚುಕಟ್ಟಾಗಿ ಒಲಿಂಪಿಕ್ಸ್ ನಡೆಸಲು ಸರ್ವರೀತಿಯಲ್ಲಿ ಸಜ್ಜಾಗಿದೆ. ಈ ಸಲ ಒಲಿಂಪಿಕ್ಸ್ ಮೊದಲಿನ ಒಲಿಂಪಿಕ್ಸ್ಗಳಿಗಿಂತ ಹೆಚ್ಚು ಕುತೂಹಲ ಕೆರಳಿಸಿದೆ. ಹಲವು ಸಮಸ್ಯೆಗಳ ನಡುವೆಯೋ ವ್ಯವಸ್ಥಿತವಾಗಿ ಕ್ರೀಡಾ ಹಬ್ಬಕ್ಕೆ ಸಜ್ಜಾಗಿರುವ ರಿಯೋ, ನೂರ್ಕಾಲ ನೆನೆಪುಳಿಯುವಂತೆ ಸರಾಗವಾಗಿ ಒಲಿಂಪಿಕ್ಸ್ ನಡೆಸಲಿ ಎಂಬುವುದು ಕ್ರೀಡಾಭಿಮಾನಿಗಳ ಆಶಯವಾಗಿದೆ.

Please follow and like us:
error