ಮೇ ಸಾಹಿತ್ಯ ಮೇಳ ವಿಲ್ಸನ್ ಬಿಜವಾಡರವರ ಮಾತುಗಳು

ಮೇ ಸಾಹಿತ್ಯ ಮೇಳ ,ಗದಗ
ದಿನಾಂಕ 4-5 ಮೇ 2019
ಅಭಿವೃದ್ಧಿ ಭಾರತ – ಕವಲುದಾರಿಗಳ ಮುಖಾಮುಖಿ
ಉದ್ಘಾಟನಾ ಹಾಗು ಪುಸ್ತಕ ಲೋಕಾರ್ಪಣೆ
ಪ್ರಗತಿಪರ ಚಿಂತಕರು ಹಾಗೂ ಮ್ಯಾಗ್ಸೆಸಿ ಪ್ರಶಸ್ತಿ ಪುರಸ್ಕೃತರಾದ ವಿಲ್ಸನ್ ಬಿಜವಾಡರವರ ಮಾತುಗಳು.
ನಾನು ಮೂಲತಃ ಕನ್ನಡದವನು ನಮ್ಮ ರಾಜ್ಯದಲ್ಲಿ ರಾಜಕೀಯ ಏನೇಣು ನಡಿತೀದೆ ಹೇಗೆ ನಡಿತಿದೆ ಅನ್ನೋದು ಸಹಜವಾಗಿ ನನಗೂ ಕುತೂಹಲವಿರುತ್ತೆ, ನಾವು ಮಾತಾಡಬೇಕಾದಾಗ ಯಾವುದೇ ಪಕ್ಷಕ್ಕೆ ಸೀಮಿತವಾಗಿ ಅಥವಾ ವಿಚಾರಧಾರೆಗೆ ಸೀಮಿತವಾಗಿ ಮಾತಾಡಬಾರದು, ನಾವು ಮಾತಾಡಬೇಕಾದರೆ ತುಂಬಾ ಯೋಚನೆ ಮಾಡಿ ಮಾತಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಭಯದ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ , ದೇಶಪ್ರೇಮ ದೇಶಪ್ರೇಮದ ಸರ್ಟಿಫಿಕೇಟ್ ಗಳನ್ನು ಕೊಡಲಾಗುತ್ತದೆ, ನ್ಯಾಯಮೂರ್ತಿಯೊಬ್ಬರು ಮಹಿಳೆಯರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ ನೇಮಕವಾದಲ್ಲಿ ಇವರು ನಮ್ಮ ಮೇಲೆಯೇ ಮಹಿಳಾ ಪರ ಆರೋಪಗಳನ್ನು ಮಾಡುತ್ತಾರೆ ಎಂಬ ಕಾರಣ ಕೊಡಲಾಗುತ್ತಿದೆ, ದೇಶದ ನ್ಯಾಯಾಧಾನ ವ್ಯವಸ್ಥೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಬಡವರಿಗೆ ದೀನ ದಲಿತರಿಗೆ ಹಿಂದುಳಿದವರಿಗೆ ನ್ಯಾಯ ಮರಿಚಿಕೆಯಾಗಿದೆ.

ರೈತರನ್ನು ನೀವು ಇಂದೇ ಪ್ರಶ್ನೆಯನ್ನು ಮಾಡಿ ಐದು ವರ್ಷಗಳಲ್ಲಿ ನಿಮಗೇನಾದರೂ ಕೆಲಸಗಳಾಗಿವೆಯೇ ಎಂದು, ಇಲ್ಲ ಎಂಬ ಉತ್ತರ ದೊರೆಯುತ್ತದೆ. ಬೇರೆ ಬೇರೆ ವೃತ್ತಿಯವರನ್ನು ಕೇಳಿ ಇಲ್ಲವೆನ್ನುತ್ತಾರೆ. ಆದರೆ ಇದೇ ಪ್ರಶ್ನೆಗೆ ಉತ್ತರವನ್ನು ಪಡೆದಾಗ ದೇಶಕ್ಕಾಗಿ ಏನಾದರೂ ಮಾಡೋಣ ದೇಶದ ಹಿತಕ್ಕಾಗಿ ಓಟು ಮಾಡಬೇಕು ಅಂತ ಹೇಳ್ತಾರೆ ಈ ರೀತಿ ಮನಸ್ಥಿತಿಗಳನ್ನು ಸೃಷ್ಟಿ ಮಾಡಲಾಗಿದೆ, ಅವರು ಅಂದುಕೊಂಡ ದೇಶಕ್ಕಾಗಿ ಓಟು ಕೇಳುತ್ತಿದ್ದಾರೆಯೇ ಹೊರತು ಭಾರತದ ಜನಕ್ಕಾಗಲ್ಲ, ಪ್ರತಿ ವರ್ಷ 2000 ರೈತರು ರೈತಾಪಿ ಜೀವನ ಬಿಟ್ಟು ಕಾರ್ಮಿಕರಾಗುತ್ತಿದ್ದಾರೆ, ಮಲ ಹೊರುವ ಪದ್ದತಿಯಲ್ಲಿ ಆಧ್ಯಾತ್ಮಿಕ ಸಂತೃಪ್ತಿ ಅಂತ ಗುಜರಾತ್ ಮುಖ್ಯಮಂತ್ರಿಗಳು ಹೇಳುತ್ತಾರೆ, ಆಗ ನಾನು ಹೇಳಿದ್ದೆ ಹಾಗಾದರೆ ನೀವು‌ ಮಲ ಹೊತ್ತು ಸಂತೃಪ್ತಿ ಪಡೆಯಿರಿ ಎಂದಲ್ಲ ಇದು ಯಾರಿಗೂ ಬೇಡ ಎಂದೆ. ಸಫಾಯಿ ಕರ್ಮಚಾರಿ ಆಂದೋಲನ್ ನಾವು ಪ್ರಾರಂಭ ಮಾಡಿದ್ದು ಈ ಸಮಸ್ಯಗಳಿಂದ ಹೊರಬರಲು, ನೀವು ಬಡವರಾಗಿ ಹುಟ್ಟಿದ್ದು ಯಾಕೆ ಎಂದು ಕೇಳಿದಾಗ ಬಾಬಾ ಉತ್ತರ ಹೀಗಿರುತ್ತದೆ ನೀನು ಹುಟ್ಟಿದ ಜಾತಿ ಎಂದು, ಏನಾದರೂ ಪ್ರಶ್ನೆ ಮಾಡಿದಾರೆ ನಿಮ್ಮ ಹಣೆಬರಹವೆಂಬ ಹಣೆಪಟ್ಟಿ ಕಟ್ಟುತ್ತಾರೆ, ಅಂಧಶ್ರದ್ದೇಗಳನ್ನು ನಮ್ಮ ಮೆದುಳಿನಲ್ಲಿ ತುರುಕುತ್ತಾರೆ. ನಿರಂತರ ಹೋರಾಟಗಳ ನಂತರ ಸೆಪ್ಟಿಕ್ ಟ್ಯಾಂಕ್ ಗಳನ್ನು ಸರಕಾರಗಳು ಜಾರಿ ಮಾಡಿವೆ ಹಾಗೂ ಖಾಸಗಿಯಲ್ಲೂ ಅದು ನಡಿತಿವೆ. ಕೊನೆಯಲ್ಲಿ ನನ್ನದೊಂದು ಪ್ರಶ್ನೆ ಯಾರಾದರೂ ಸತ್ತರೆ ದೇಶವೆಲ್ಲಾ ತುಂಬಾ ಭಾವುಕವಾಗುತ್ತೆ ದಿನೆ ದಿನೇ ಸಫಾಯಿ ಕರ್ಮಚಾರಿಗಳು ಗಟಾರದಲ್ಲಿಳಿದು ಸ್ವಚ್ಛಗೊಳಿಸುತ್ತಾ ಸಾಯುತ್ತಿದ್ದಾರೆ ದೇಶದ ಜನಕ್ಕೆ ಆಕ್ರೋಶ ಬರುತ್ತಿಲ್ಲ ???

Please follow and like us:
error