ಮೇ ಸಾಹಿತ್ಯ ಮೇಳ – ರಾವ್ ಸಾಹೇಬ್ ಕಸಬೆಯವರ ಮಾತುಗಳು

ದ್ಘಾಟನೆ ಕಾರ್ಯಕ್ರಮದಲ್ಲಿ ಬಾಂಬೆಯ ಪ್ರಗತಿಪರ ಚಿಂತಕರಾದ ರಾವ್ ಸಾಹೇಬ್ ಕಸಬೆಯವರ ಮಾತುಗಳು

ಕನ್ನಡ ಭಾಷೆ ನನಗೆ ಬರುವುದಿಲ್ಲ ಇದು ಒಂದು ರಿದಮ್ ಇರೋ ಭಾಷೆ ಇದು ನಾನು ಮೊದಲ ಸಲ ಕರ್ನಾಟಕಕ್ಕೆ ಬಂದಾಗ ಬಹಳ ಖುಷಿಯಾಗಿತ್ತು ಯಾಕೆಂದರೆ ನಾನು ಬಸವಣ್ಣನ ನೆಲಕ್ಕೆ ಬಂದಿದ್ದೆ, ಇಲ್ಲಿ ಬಂದ ನಾವೆಲ್ಲಾ ಹೊಸ ಭಾರತ ಕಟ್ಟುವ ಕನಸು ಕಾಣುತ್ತಿದ್ದೇವೆ , ಕನಸಾದ್ರೂ ಕಾಣುತ್ತಿದ್ದೇವಲ್ಲಾ ಎಂಬುದು ಖುಷಿಯ ವಿಚಾರ, ಇಲ್ಲಿ ಬೇರೆ ಬೇರೆ ಜನಾಂಗಗಳಿವೆ, ಧರ್ಮಗಳಿವೆ, ವರ್ಣಗಳಿವೆ, ಭಾಷೆಗಳಿವೆ ಇದೆಯಲ್ಲವೇ ಭಾರತದೇಶದ ಸೌಂದರ್ಯ, ಈಗೀಗ ಭಾರತದಲ್ಲಿ ಭಾರತ ಮಾತಾ ಕಿ ಜೈ ಅನ್ನೊದು ಸದ್ದು ಕೇಳಿ ಬರುತ್ತಿದೆ, ಮೊದಲು ಇಲ್ಲದ ರಾಷ್ಟ್ರವನ್ನು ಜೈಕಾರ ಹಾಕುವುದೇನು ? ಮೊದಲ ರಾಷ್ಟ್ರ ನಿರ್ಮಿಸೋಣ, ಯಾರ್ಯಾರೋ ರಾಜರುಗಳು, ಮೊಗಲರು, ಸುಲ್ತಾನರು ರಾಜರು ಬಂದರೂ ರಾಷ್ಟ್ರವನ್ನು ಮಾಡಲಾಗಲಿಲ್ಲ. ಸಮಾಜವಾದ, ಸಮಾನತೆ, ನಾಡು ಕಟ್ಟುವ ಕನಸು ನನಸಾಗಿದ್ದೆ ಬಾಬಾಸಾಹೇಬರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಭಾರತ ನನ್ನ ದೇಶವೆಂದು ಹೇಳುವಂತೆ ಮಾಡಿದರು.ಬಂದ ಮೇಲೆ ಗಾಂಧೀಜಿಯೂ ಚರಕ ಬಳಸುತ್ತಿದ್ದರು ಮೋದಿಯೂ ಬಳಸುತ್ತಿದ್ದಾರೆ ಪ್ರಚಾರಕ್ಜಾಗಿ ಆದರೆ ಗಾಂಧೀಜಿಯ ಪಕ್ಕಕ್ಕೆ ಕಸ್ತೂರಬಾ ಇದ್ದರು ಆದರೆ ಇವರು ಒಬ್ಬರೇ ಇದ್ದದ್ದು ಇದನ್ನು ನಾವು ಗಮನಿಸಬೇಕು, ಸಂವಿಧಾನವನ್ನು ಒಪ್ಪಿಸುವಾಗ ಸಂವಿಧಾನದಲ್ಲಿ ಇನ್ ದ ನೇಮ್ ಆಫ್ ಅಲ್ಲಾ, ಈಶ್ವರ್, ಗಾಂಧೀಜಿ ಎಂದು ಯಾರಾದರನ್ನೂ ಪ್ರಾರಂಭದಲ್ಲಿ ಸೇರಸಿ ಬರೆಯಿರಿ ಎಂಬ ಅಭಿಪ್ರಾಯ ಕೇಳಲ್ಪಟ್ಟಿತ್ತು ಅದು ತುಂಬಾ ಚರ್ಚೆಗೂ ಒಳಪಟ್ಟಿತ್ತು, ನಾವು ಏಕೆ ಬದುಕುತ್ತಿದ್ದೇವೆ ಎಂದು ನನ್ನನ್ನೂ ಪ್ರಶ್ನೆ ಕಾಡುತ್ತಿತ್ತು ಅದಕ್ಕೆ ಬಾಲಕನೊಬ್ಬ ಉತ್ತರಿಸಿದ್ದ ನಮಗೆ ಸಾಯಲು ಆಗುವುದಿಲ್ಲ ಹಾಗಾಗಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದ್ದ, ಮನುಷ್ಯ ಮತ್ತು ಪ್ರಾಣಿಗಳ ಜೀವನಕ್ಕೆ ವ್ಯಾತ್ಯಾಸವನ್ನು ತಿಳಿದವನ ಮಾತುಗಳಾಗಿದ್ದವು ನಮ್ಮ ಜೀವನಕ್ಕ ಅರ್ಥ ಕೊಡಲು ನಾವು ಬದುಕಬೇಕಿದೆ ನಮ್ಮ ಜೀವನವನ್ನು ತುಂಬಾ ಅದ್ಭುತವಾಗಿ ಜೀವಿಸಿ ಮುಂದಿನ ಭವಿಷ್ಯವನ್ನು ಸುಂದರಗೋಳಿಸುವುದಾಗಿರಬೇಕು. ಎಂತಹ ದುರಂತವೆಂದರೆ ಭಾರತದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುತ್ತದೆ. ಮನಸ್ಸಿನಿಂದ ಯಾವುದೇ ಹುಡುಗಿಗೆ ನೀವು ಪ್ರೀತಿಸಿದ್ದರೆ ನೀವು ಹೆಣ್ಣನ್ನು ಗೌರವಿಸುತ್ತಿದ್ದಿರಿ. ಅರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗದಿದ್ದರೆ ಮುಂದೆ ದೊಡ್ಡ ಆಘಾತ ಕಾದಿದೆ ಹಾಗಾಗಿ ಸಂವಿಧಾನವನ್ನು ಉಳಿಸುವ ಅಗತ್ಯವಿದೆ ಇದರಲ್ಲಿ ನಾವು ಎಡವಿದರೆ ಪ್ರಜಾಪ್ರಭುತ್ವಕ್ಕೆ ಕುತ್ತು ಬರಲಿದೆ, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ, ಸೃಷ್ಟಿಯಾದರೆ ಮಹಿಳೆಯರ ಮೇಲೆ ಅದು ಕೆಟ್ಟ ಪರಿಣಾಮ ಬೀರಲಿದೆ, ದೇಶ ಫ್ಯಾಸಿಸಂ ಕಡೆ ವಾಲುವುದು ಕಟ್ಟಿಟ್ಟ ಬುತ್ತಿ ಮುಂದೆ ಯೋಚಿಸಿ ಹೆಜ್ಜೆಗಳನ್ನಿಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಎಚ್ಚರಸಿದರು.

Please follow and like us:
error