ಮೂರಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ದುರಂತ: ಕನಿಷ್ಠ ಏಳು ಮಂದಿ ಸಜೀವದಹನ

ಭೋಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್‍ ನ ಇಂದರ್‍ ಗಂಜ್ ಚೌಕದ ಸಮೀಪದ ರೋಶನಿ ಘರ್ ರಸ್ತೆ ಬದಿಯಲ್ಲಿನ ಮೂರಂತಸ್ತಿನ ವಸತಿ ಹಾಗೂ ವಾಣಿಜ್ಯ ಸಂಕೀರ್ಣದಲ್ಲಿ ಇಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. ಈ ಕಟ್ಟಡದಲ್ಲಿ ಸುಮಾರು 25 ಜನರು ವಾಸವಾಗಿದ್ದರು.ಈ ಕಟ್ಟಡದ ತಳ ಅಂತಸ್ತಿನಲ್ಲಿ ಪೈಂಟ್ ಅಂಗಡಿಯಿದ್ದರೆ ಉಳಿದ ಎರಡು ಅಂತಸ್ತುಗಳಲ್ಲಿ ಮನೆಗಳಿದ್ದವು.

ಅಗ್ನಿ ಅವಘಡ ಸಂಭವಿಸಿದ ಕಟ್ಟಡವು ರಂಗ್ವಾಲ ಹೌಸ್‍ನ ಹರಿಓಂ ಗೋಯಲ್ ಎಂಬವರಿಗೆ ಸೇರಿದೆ. ಸ್ಥಳಕ್ಕೆ ಅಗ್ಮಿಶಾಮಕ ವಾಹನಗಳು ಆಗಮಿಸುವ ಮೊದಲೇ ಐದು ಜನರು ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದರು. ಬೆಂಕಿಯ ಕೆನ್ನಾಲಗೆ ಅರೆ ಗಳಿಗೆಯಲ್ಲಿ ಇಡೀ ಕಟ್ಟಡವನ್ನು ವ್ಯಾಪಿಸಿತ್ತು.  ಕೆಲವು ಜನರನ್ನು ಅವರ ಮನೆಯ ಹಿಂಬದಿಯ ಗೋಡೆಯನ್ನು ಒಡೆದು ರಕ್ಷಿಸಲಾಯಿತು. ಮೂವರು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯಾಚರಣೆ  ಜಿಲ್ಲಾ ಕಲೆಕ್ಟರ್ ಕೌಶಲೇಂದ್ರ ವಿಕ್ರಮ್ ಸಿಂಗ್ ಹಾಗೂ ಎಸ್‍ಪಿ ನವನೀತ್ ಭಾಸಿನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

Please follow and like us:
error