ಮಾಸ್ಕ್ ಧರಿಸಿದ ದುಷ್ಕರ್ಮಿಗಳ ತಂಡದಿಂದ ಜೆಎನ್ ಯುನಲ್ಲಿ ದಾಂಧಲೆ 

ಎಬಿವಿಪಿ ಕಾರ್ಯಕರ್ತರ ಕೃತ್ಯ : ವಿದ್ಯಾರ್ಥಿಗಳು , ಶಿಕ್ಷಕರ ಮೇಲೆ ಹಲ್ಲೆ  ಆರೋಪ

: ಹೊಸದಿಲ್ಲಿ : ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ದಿಲ್ಲಿಯ ಜವಹರಲಾಲ್ ನೆಹರೂ ವಿವಿ ( ಜೆಎನ್ ಯು ) ಕ್ಯಾಂಪಸ್ ನೊಳಕ್ಕೆ ನುಗ್ಗಿ ಹಿಂಸಾಚಾರ ನಡೆಸಿದ್ದಾರೆ . ದುಷ್ಕರ್ಮಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ . ಘಟನೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ . ಸುಮಾರು 50 ಮಂದಿಯಿದ್ದ ದುಷ್ಕರ್ಮಿಗಳ ಗುಂಪು ಕ್ಯಾಂಪಸ್ ನೊಳಕ್ಕೆ ನುಗ್ಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ . ಹಾಸ್ಟೆಲ್ ನೊಳಕ್ಕೆ ನುಗ್ಗಿದ ಗುಂಪು ಭಾರೀ ಗಾತ್ರದ ಕಲ್ಲುಗಳನ್ನು ಎಸೆಯಿತು ಎಂದವರು ಹೇಳಿದ್ದಾರೆ . ಘಟನೆಯಲ್ಲಿ ವಿದ್ಯಾರ್ಥಿ ಯುನಿಯನ್ ಅಧ್ಯಕ್ಷೆ ಐಶ್ ಘೋಶ್ ರಿಗೆ ಗಂಭೀರ ಗಾಯಗಳಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ . ಇದು ಎಬಿವಿಪಿ ಕಾರ್ಯಕರ್ತರ ಕೃತ್ಯ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ . ಪೊಲೀಸರ ಸಮ್ಮುಖದಲ್ಲೇ ಲಾಠಿ , ರಾಡ್ ಗಳನ್ನು ಹಿಡಿದಿದ್ದ ಎಬಿವಿಪಿ ಕಾರ್ಯಕರ್ತರು ಕ್ಯಾಂಪಸ್ ನೊಳಕ್ಕೆ

ಘಟನೆಯಲ್ಲಿ ವಿದ್ಯಾರ್ಥಿ ಯುನಿಯನ್ ಅಧ್ಯಕ್ಷೆ ಐಶ್ ಘೋಶ್ ರಿಗೆ ಗಂಭೀರ ಗಾಯಗಳಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ . ಇದು ಎಬಿವಿಪಿ ಕಾರ್ಯಕರ್ತರ ಕೃತ್ಯ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ . ಪೊಲೀಸರ ಸಮ್ಮುಖದಲ್ಲೇ ಲಾಠಿ , ರಾಡ್ ಗಳನ್ನು ಹಿಡಿದಿದ್ದ ಎಬಿವಿಪಿ ಕಾರ್ಯಕರ್ತರು ಕ್ಯಾಂಪಸ್ ನೊಳಕ್ಕೆ ನುಗ್ಗಿದರು . ಇಟ್ಟಿಗೆಗಳನ್ನು ಎಸೆದರು . ಹಾಸ್ಟೆಲ್ ಗಳಿಗೆ ನುಗ್ಗಿ ವಿದ್ಯಾರ್ಥಿಗಳಿಗೆ ಥಳಿಸಿದರು ಜೆಎನ್ ಯುಎಸ್ ಯು ಅಧ್ಯಕ್ಷರಾದ ಐಶ್ ಘೋಶ್ ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು , ಅವರ ತಲೆಯಿಂದ ರಕ್ತ ಸುರಿಯುತ್ತಿತ್ತು ‘ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ .

Please follow and like us:
error