ಮಾನವ ಹಕ್ಕು ಕುರಿತ ಪಾಶ್ಚಿಮಾತ್ಯ ಮಾನದಂಡ ಭಾರತಕ್ಕೆ ಅನ್ವಯಿಸುವುದಿಲ್ಲ – ಅಮಿತ್ ಶಾ

ಹೊಸದಿಲ್ಲಿ ,  : ಮಾನವ ಹಕ್ಕು ಕುರಿತ ಪಾಶ್ಚಿಮಾತ್ಯ ಮಾನದಂಡ ಭಾರತಕ್ಕೆ ಅನ್ವಯಿಸುವುದಿಲ್ಲ . ಮಹಿಳೆಯರಿಗೆ ಶೌಚಾಲಯಕ್ಕೆ ಪ್ರವೇಶ ಇಲ್ಲದಿರುವುದು , ಮಹಿಳೆಯರಿಗೆ ಸುರಕ್ಷಿತ ಅಡುಗೆ ಸೌಲಭ್ಯ ಕಲ್ಪಿಸದಿರುವುದು ಮಾನವ ಹಕ್ಕಿನ ವಿಷ

ಯವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ರಾಷ್ಟ್ರೀಯ ಮಾನವಹಕ್ಕು ಆಯೋಗದ 26ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ಅಸಹನೀಯ ಪರಿಸ್ಥಿತಿಯಲ್ಲಿದ್ದ ಮಿಲಿಯಾಂತರ ಜನರ ಬದುಕನ್ನು ಮೋದಿ ಸರಕಾರ ಸುಧಾರಿಸಿದೆ ಎಂದವರು ಹೇಳಿದ್ದಾರೆ . ಭಾರತದಲ್ಲಿ ಪೊಲೀಸರ ಕ್ರೌರ್ಯ ಮತ್ತು ಕಸ್ಟಡಿ ಸಾವಿನ ಪ್ರಕರಣಗಳಿಗೆ ನೀಡುವಷ್ಟೇ ಮಹತ್ವವನ್ನು ಉಗ್ರವಾದಿಗಳಿಂದ ಹತ್ಯೆಯಾಗುವ ನಾಗರಿಕರ ಪ್ರಕರಣಗಳಿಗೂ ನೀಡಬೇಕು . ಮಾವೋವಾದಿ ಗುಂಪುಗಳು ಮತ್ತು ಭಯೋತ್ಪಾದಕ ತಂಡಗಳು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ಭಾರತೀಯ ದೃಷ್ಟಿಕೋನದಿಂದ ನೋಡಬೇಕಾಗಿದೆ . ಮಾನವಹಕ್ಕು ಕುರಿತ ಸಾಂಪ್ರದಾಯಿಕ ಪರಿಕಲ್ಪನೆಯ ಬದಲು ಹೊಸದಾದ ಪರಿಕಲ್ಪನೆ ರೂಪಿಸುವ ಅಗತ್ಯವಿದೆ . ಮಾನವ ಹಕ್ಕು ಎಂದಾಕ್ಷಣ ಪೊಲೀಸ್ ದೌರ್ಜನ್ಯ ಮತ್ತು ಕಸ್ಟಡಿ ಸಾವಿನ ಪ್ರಕರಣ ಎಂದು ಜನತೆ ಭಾವಿಸುವಂತಾಗಿದೆ . ಇದಕ್ಕೆ ನಮ್ಮ ಆಕ್ಷೇಪವಿಲ್ಲ . ಆದರೆ ಇದಕ್ಕೆ ಇತರ ಹಲವು ಆಯಾಮಗಳಿದ್ದು ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು ಎಂದು ಶಾ ಹೇಳಿದರು . ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಚ್ಎಲ್ ದತ್ತು ಮಾತನಾಡಿ , ಆಯೋಗದ ಜವಾಬ್ದಾರಿಯನ್ನು ನೆರವೇರಿಸಲು ಕೇಂದ್ರ ಸರಕಾರ ಪೂರ್ಣ ಸಹಕಾರ ನೀಡುತ್ತಿದೆ . ಜೀತ ಪದ್ದತಿ , ಕಸ್ಟಡಿ ಸಾವಿನಂತಹ ಪ್ರಕರಣಗಳನ್ನು ಆಯೋಗ ಸೂಕವಾಗಿ ನಿರ್ವಹಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿದೆ ಎಂದು ಹೇಳಿದರು.

Please follow and like us:
error