ಮಾಜಿ ಕೇಂದ್ರ ವಿತ್ತ ಸಚಿವ ಚಿದಂಬರಂಗೆ ಸುಪ್ರೀಂಕೋರ್ಟ್ ನಿಂದ ಜಾಮೀನು 

 ಹೊಸದಿಲ್ಲಿ   : ಸಿಬಿಐ ಸಲ್ಲಿಸಿರುವ ಐಎನ್‌ಎಕ್ಸ್ 

ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ವಿತ್ತ ಸಚಿವ ಚಿದಂಬರಂಗೆ ಸುಪ್ರೀಂಕೋರ್ಟ್ ಮಂಗಳವಾರ ಜಾಮೀನು ನೀಡಿದೆ . ಕಾಂಗ್ರೆಸ್ ನಾಯಕ ಚಿದಂಬರಂಗೆ ಜಾಮೀನು ಲಭಿಸಿದ್ದರೂ ಜಾರಿ ನಿರ್ದೇಶನಾಲಯದ ( ಇ . ಡಿ . ) ಕಸ್ಟಡಿಯಲ್ಲಿರುವ ಕಾರಣ ತಕ್ಷಣವೇ ಬಿಡುಗಡೆ ಭಾಗ್ಯ ಲಭಿಸಿಲ್ಲ . ಚಿದಂಬರಂರಿಗೆ2 ಕ್ಯೂರಿಟಿ ಸಹಿತ ಒಂದು ಲಕ್ಷ ರೂ . ಜಾಮೀನು ಬಾಂಡ್ ಸಲ್ಲಿಸುವ ಅಗತ್ಯವಿದೆ . ವಿಚಾರಣಾ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್‌ ಸಲ್ಲಿಸಬೇಕು . ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ . ಆಗಸ್ಟ್ 21ರಂದು ಸಿಬಿಐ ಚಿದಂಬರಂರನ್ನು ಬಂಧಿಸಿತ್ತು . ಇತ್ತೀಚೆಗೆ ಚಿದಂಬರಂ , ಅವರ ಪುತ್ರ ಕಾರ್ತಿ , ಇತರ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿ ಚಾರ್ಜ್‌ಶೀಟ್ ಸಲ್ಲಿಸಿತ್ತು . 

Please follow and like us:
error