ದೇಶವ್ಯಾಪಿ ನಡೆಯುವ ಬ್ಯಾಂಕ್ ಮುಷ್ಕರಕ್ಕೆ ಅಂದಾಜು 50 ರಾಷ್ಟ್ರೀಕೃತ ಬ್ಯಾಂಕ್ಗಳು, ಖಾಸಗಿ ಹಾಗೂ ವಿದೇಶಿ ಬ್ಯಾಂಕುಗಳು ಕೈ ಜೋಡಿಸಿವೆ. ಒಟ್ಟಿನಲ್ಲಿ ದೇಶಾದ್ಯಂತ 80 ಸಾವಿರಕ್ಕೂ ಅಧಿಕ ಬ್ಯಾಂಕುಗಳಲ್ಲಿ ಇಂದು ಯಾವುದೇ ದುಡ್ಡಿನ ವಹಿವಾಟು ನಡೆಯುವುದಿಲ್ಲ. ಬ್ಯಾಂಕ್ ಮುಷ್ಕರ ಹೂಡಿರುವ ಬ್ಯಾಂಕ್ ನೌಕರರ ಬೇಡಿಕೆಗಳು: 1) ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ವಿಲೀನ ಬೇಡ, 2) ಬ್ಯಾಂಕುಗಳ ಖಾಸಗೀಕರಣ ಮಾಡುವುದು ಬೇಡ, 3) ಕಾರ್ಪೊರೇಟ್ ಉದ್ಯಮಿಗಳ ಸಾಲ ಬಹಿರಂಗಪಡಿಸಬೇಕು, 4) ಸಾಲ ಮರುಪಾವತಿ ಮಾಡದ ಉದ್ಯಮಿಗಳ ವಿರುದ್ಧ ಕ್ರಮ, 5) ನಷ್ಟದಲ್ಲಿರುವ ಬ್ಯಾಂಕುಗಳಿಗೆ ಆರ್ಥಿಕ ನೆರವು ನೀಡಬೇಕು
Please follow and like us: