ಹೊಸದಿಲ್ಲಿ, ನ . 13 : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಚಿವರ ಮೇಲೆ ಬಿಗಿ ಹಿಡಿತ ಹಾಗು ನಿಗಾ ಇಟ್ಟಿರುವುದು ಎಲ್ಲರಿಗೂ ತಿಳಿದ ವಿಷಯ. ಮೋದಿ ಸಂಪುಟದ ಸಚಿವರು ಯಾವುದೇ ವಿಷಯದಲ್ಲೂ ಪ್ರಧಾನಿಯ ಅವಕೃಪೆಗೆ ಗುರಿಯಾಗದಂತೆ ಸಾಕಷ್ಟು ಜಾಗರೂಕತೆ ವಹಿಸುತ್ತಾರೆ. ಆದರೆ ಇತ್ತೀಚಿಗೆ ಕೇಂದ್ರ ಸಚಿವರೊಬ್ಬರು ಪ್ರಧಾನಿಯ ಸಿಟ್ಟಿಗೆ ಗುರಿಯಾಗಿ ಅತ್ತೇ ಬಿಟ್ಟಿದ್ದಾರೆ ಎಂದು ಜನಸತ್ತಾ ವರದಿ ಮಾಡಿದೆ.
ಈ ಕೇಂದ್ರ ಸಚಿವರು ಯಾರು ಎಂದು ವೆಬ್ ಸೈಟ್ ವರದಿ ಮಾಡಿಲ್ಲ. ಈ ಸಚಿವರ ಆಪ್ತ ಸಿಬ್ಬಂದಿಯೊಬ್ಬರು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಜಾಹೀರಾತಿನಲ್ಲಿ ಭಾರೀ ಮೊತ್ತದ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬೇಹು ಇಲಾಖೆ ಪ್ರಧಾನಿಯವರಿಗೆ ವರದಿ ಮಾಡಿತ್ತು. ಇದರಿಂದ ಸಿಟ್ಟಾದ ಪ್ರಧಾನಿ ಕೇಂದ್ರ ಸಚಿವರನ್ನು ಕರೆದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ . ಇದರಿಂದ ಕಂಗೆಟ್ಟ ಆ ಸಚಿವರು ಅತ್ತೇ ಬಿಟ್ಟರು ಎಂದು ಜನಸತ್ತಾ ವರದಿ ಮಾಡಿದೆ.
Please follow and like us: