ಬಿರಿಯಾನಿ ಮಾರಾಟ ಮಾಡಿದ ದಲಿತನಿಗೆ  ಥಳಿತ

 ನೊಯ್ಯ , ಡಿ . 15 : ಉತ್ತರ ಪ್ರದೇಶದ ಗ್ರೇಟರ್ ನೋಯ್ಡದ ರಬುಪರ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡಿದ್ದಕ್ಕಾಗಿ 43 ವರ್ಷದ ದಲಿತ ವ್ಯಕ್ತಿಯೊಬ್ಬನಿಗೆ ಕೆಲ ದುಷ್ಕರ್ಮಿಗಳು ಥಳಿಸಿದ ಘಟನೆ ನಡೆದಿದೆ . ಈ ಘಟನೆಯ ವೀಡಿಯೋ ಸಾಮಾಜಿಕ 

ಜಾಲತಾಣಗಳಲ್ಲಿ ವೈರಲ್ ಆಗಿದೆ . ಸಂತ್ರಸ್ತನ ಕೆನ್ನೆಗೆ ಯಾರೋ ಬಾರಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ . ಒಬ್ಬ ಆತನಿಗೆ ಕೈ ಕಟ್ಟಿ ನಿಲ್ಲಲು ಹೇಳುತ್ತಿರುವುದು ಕೂಡ ಕೇಳಿಸುತ್ತದೆ . ಘಟನೆ ಕುರಿತಂತೆ ಸಂತ್ರಸ್ತ ನೀಡಿದ ದೂರಿನಂತೆ ಮೂವರು ಅಪರಿಚಿತರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ವೀಡಿಯೋ ನೋಡಿದ ಪೊಲೀಸರು ತನಿಖೆ ಆರಂಭಿಸಿದ್ದು , ಆರೋಪಿಗಳಿಗೆ ಬಲೆ ಬೀಸಿದ್ದಾರೆ . ಆರೋಪಿಗಳು ಸಂತ್ರಸ್ತನ ಆಹಾರ ಸ್ವಾಲ್ ಅನ್ನೂ ಕೆಡವಿದ್ದಾರೆ ಎಂದು ಹೇಳಲಾಗಿದೆ .

Please follow and like us:
error